ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರಿನಲ್ಲಿ ಬಸ್ ಫುಲ್ ರಶ್ ರಶ್

ರಾಯಚೂರು:- ಭೀಕರ ಬರಗಾಲ ಹಿನ್ನೆಲೆ ರಾಯಚೂರು ಜಿಲ್ಲೆಯ ಜನ ಮಹಾನಗರಗಳತ್ತ ಗುಳೆ ಹೊರಟಿದ್ದು ಜಿಲ್ಲೆಯ ಹಲವು ಬಸ್ ನಿಲ್ದಾಣಗಳಲ್ಲಿ ರಾತ್ರಿಯಾದ್ರೆ ಬಸ್ ಗಾಗಿ ಜನ ಮುಗಿ ಬೀಳುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

ದಸರಾ ರಜೆ ಮುಗಿದು ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಳವಾಗಿದ್ದು ನಿಲ್ದಾಣಗಳಲ್ಲಿ ಬಸ್ ಗಾಗಿ ಪರದಾಟ‌‌ ಹೆಚ್ಚಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಬಸ್ ಇಲ್ಲದೆ ಜನರ ಪರದಾಡಿದ ದೃಶ್ಯ ಕಂಡುಬಂದಿದ್ದು ಖಾಸಗಿ ಬಸ್ ದರ ದಿಢೀರ್ ಹೆಚ್ಚಳಕ್ಕೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಬಸ್ ಗಳು ತಲಾ ಒಬ್ಬರಿಗೆ 3000 ರೂ ಫಿಕ್ಸ್ ಮಾಡಿದ ಹಿನ್ನೆಲೆ, ಸಂಜೆ 5 ಗಂಟೆಯಿಂದ ಯಿಂದ ರಾತ್ರಿ 10 ಗಂಟೆಯಾದರೂ ಕೆಎಸ್ಆರ್ ಟಿಸಿ ಬಸ್ ನಲ್ಲಿ ಸೀಟ್ ಸಿಗದೆ ಜನ ಪರದಾಡಿದ್ದಾರೆ.

ಬೆಂಗಳೂರು, ಮಂಗಳೂರು, ಪುಣೆಗೆ ತೆರಳಬೇಕಿದ್ದ ಜನ

ಜಿಲ್ಲೆಯಾದ್ಯಂತ ನೂರಕ್ಕೂ ಹೆಚ್ಚು ಬಸ್ ಗಳಿದ್ದರೂ ಪ್ರಯಾಣಿಕರಿಗೆ ಸಾಕಾಗುತ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.

Edited By :
PublicNext

PublicNext

23/10/2026 09:21 pm

Cinque Terre

8.14 K

Cinque Terre

0