ಗದಗ : ಕೊಡಲಿಯಿಂದ ಹೊಡೆದು ಸ್ನೇಹಿತನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ದ್ಯಾವಪ್ಪ ಗೊಜನೂರು (62) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಸುರಕೋಡ ಗ್ರಾಮದ ಶರಣಪ್ಪ ನರಗುಂದ ಎಂಬ ಸ್ನೇಹಿತನೇ ಕೊಲೆ ಮಾಡಿರುವುದು ದುರಂತ.
ದ್ಯಾವಪ್ಪ ಅವರ ಸಾವಿನ ರಹಸ್ಯ ಬಯಲಾದ ರೀತಿಯೂ ರೋಚಕವಾಗಿದೆ. 11 ದಿನಗಳಿಂದ ನಾಪತ್ತೆಯಾಗಿದ್ದ 62 ವರ್ಷದ ದ್ಯಾವಪ್ಪ ಅಕ್ಟೋಬರ್ 8ರಂದು ಮನೆಯಿಂದ ತೆರಳಿದ್ದರು. ಅಕ್ಟೋಬರ್ 19ರಂದು ಕಾಲುವೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಪಕ್ಕಾ ಯೋಜನೆ ರೂಪಿಸಿ ಕೊಲೆ ಮಾಡಿದ್ದ ಶರಣಪ್ಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
PublicNext
20/10/2026 09:15 am
LOADING...