ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ಲಂಚದ ಹಾವಳಿ

ಗದಗ: (Exclusive ) ಲಂಚಕ್ಕೆ ಅಧಿಕಾರಿಗಳು ಕೈಚಾಚುತ್ತಿದ್ದಾರೆ ಎಂಬುದು ಎಲ್ಲೆಡೆ ಕೇಳಿಬರುತ್ತಿರುವ ಮಾತು. ಆದರೆ ಈಗ ಆ ಸರದಿ ಗುತ್ತಿಗೆ ಆಧಾರದ ನೌಕರರಿಗೂ ಬಂದಿದೆ.

ಗದಗ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಜಯ್ ಕುಡತೀನಿ ಎಂಬ ಗುತ್ತಿಗೆ ನೌಕರ ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ದೃಶ್ಯಾವಳಿ ಇರುವ ವಿಡಿಯೋ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ.

ವಿಡಿಯೋದಲ್ಲಿ, ಗರಿ ಗರಿ ನೋಟುಗಳನ್ನು ವಿಧ ವಿಧವಾಗಿ ವಿಂಗಡಿಸಿ ಪರ್ಸ್, ಪ್ಯಾಂಟ್ ಜೇಬು ಸೇರಿದಂತೆ ಎಲ್ಲೆಡೆ ಇಟ್ಟುಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗುತ್ತಿಗೆ ಆಧಾರದ ನೌಕರರೇ ಈ ರೀತಿ ರಾಜಾರೋಷವಾಗಿ ಸರ್ಕಾರಿ ಕಚೇರಿಯ ಒಳಗೆ ಹಣ ತೆಗೆದುಕೊಳ್ಳುತ್ತಿದ್ದರೆ, ಇನ್ನು ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಎಷ್ಟರ ಮಟ್ಟಿಗೆ ಲಂಚಕ್ಕೆ ಕೈಚಾಚುತ್ತಿದ್ದಾರೆ ಎಂಬುದು ತನಿಖೆಯ ನಂತರವೇ ಗೊತ್ತಾಗಬೇಕು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Edited By : Vinayak Patil
PublicNext

PublicNext

01/11/2026 09:24 pm

Cinque Terre

9.84 K

Cinque Terre

1