ಕಲಬುರಗಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 13 ಎಕರೆ ಕಬ್ಬು ಬೆಂಕಿಗಾಹುತಿಯಾದ ಘಟನೆ.ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಯಡಗಾ ಗ್ರಾಮದಲ್ಲಿ ನಡೆದಿದೆ. ಪಂಡಿತರಾವ್ ಎಂಬುವರದು 6 ಎಕರೆ, ಗೌಡಪ್ಪ ತಾಡಪಳ್ಳಿ ಎಂಬುವರ 3 ಎಕರೆ, ಪಾರ್ವತಿಬಾಯಿ ಎಂಬುವರದು 4 ಎಕರೆ ಸೇರಿದಂತೆ 13 ಎಕರೆ ಕಬ್ಬು ಸುಟ್ಟು ಕರಕಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಟಾವಿಗೆ ಬಂದಿದ್ದ ಕಬ್ಬು ಇನ್ನೇನು ಬೆಳೆ ತೆಗೆಯುವಬೇಕೆನ್ನುವಷ್ಟರಲ್ಲೇ ಬೆಂಕಿಗಾಹುತಿಯಾಗಿದೆ. ಮೂವರು ರೈತರ 25 ಲಕ್ಷಕ್ಕೂ ಅಧಿಕ ನಷ್ಟ ಆಗಿದ್ದು ಜೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ, ಹೊರಹಾಕಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಈ ಪ್ರಕರಣ ಮಳಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
PublicNext
21/10/2026 12:00 pm
LOADING...