ಕಲಬುರಗಿ:ಕಿಡಗೇಡಿಗಳಿಂದ ಮಧ್ಯರಾತ್ರಿ ರಸ್ತೆಯಲ್ಲಿ ವಾಮಾಚಾರ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದಾಪುರ ಗ್ರಾಮದಲ್ಲಿನಡೆದಿದೆ.
ಹುಣ್ಣಿಮೆಯ ದಿನದಂದು ಈ ವಾಮಾಚಾರ ನಡೆದಿದ್ದು, ವಾಮಾಚಾರ ಕೃತ್ಯಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಚಿಂಚೋಳಿಯ ಚಂದಾಪುರ ಪಟ್ಟಣದ ಚರ್ಚ್ ಏರಿಯಾದಲ್ಲಿ ಈ ಘಟನೆ ಆಗಿದ್ದು.ನಿಂಬೆ ಹಣ್ಣು , ಅರಿಶೀಣ , ಕುಂಕಮ , ತೆಂಗು ರಸ್ತೆಯಲ್ಲಿ ಇಟ್ಟು ತೆರಳಿದ ಕಿಡಗೇಡಿಗಳು, ಮೂರು ರಸ್ತೆಗಳು ಕೂಡುವ ಮಾರ್ಗದಲ್ಲಿ ವಾಮಾಚಾರ ಮಾಡಿಟ್ಟು ಪರಾರಿಯಾಗಿದ್ದಾರೆ.
ರಸ್ತೆಯಲ್ಲಿ ವಾಮಾಚಾರ ಮಾಡಿಟ್ಟ ಹಿನ್ನಲೆಯಲ್ಲಿ ಬಡಾವಣೆಯ ಜನರಲ್ಲಿ ಆತಂಕ ಮನೆ ಮಾಡಿದ್ದು.ಕಳೆದ ಕೆಲ ದಿನಗಳಿಂದ ನಿರಂತರವಾಗಿ ವಾಮಾಚಾರ ನಡೆಯುತ್ತಿದ್ದೆ.
ಅಮವಾಸ್ಯೆ , ಹುಣ್ಣಿಮೆ , ಭಾನುವಾರ , ಮಂಗಳವಾರದಂದು ಹೆಚ್ಚಾಗಿ ನಡೆಯುತ್ತಿರುವ ವಾಮಾಚಾರ ವಿರುದ್ದ ಜನರು ರೋಷಿಹೋಗಿದ್ದಾರೆ. ಸ್ಥಳದಲ್ಲಿ ಸಿಸಿ ಟಿವಿ ಆಳವಡಿಸಲು ಗ್ರಾಮಸ್ಥರ ಮನವಿ ಮಾಡಿದ್ದಾರೆ
Kshetra Samachara
28/10/2026 03:56 pm
LOADING...