ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತರೀಕೆರೆ: ಬಿರುಗಾಳಿ ಸಹಿತ ಧಾರಾಕಾರ ಮಳೆ: ಮದುವೆ ಸಂಭ್ರಮದ ಮಧ್ಯೆ ಹಾರಿಹೋದ ಬೃಹತ್ ಶಾಮಿಯಾನ!

ಚಿಕ್ಕಮಗಳೂರು: ಕಾಫಿನಾಡಿನ ಬಯಲುಸೀಮೆ ಭಾಗದಲ್ಲಿ ಮಳೆಯ ಅಬ್ಬರಿಸಿದೆ, ತರೀಕೆರೆ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ.

ಮಳೆಯ ಆರ್ಭಟಕ್ಕೆ ತರೀಕೆರೆ ಪಟ್ಟಣದ ಕೊಡಿಕ್ಯಾಂಪ್ ಬಳಿ ಇರುವ ಶಾದಿಮಹಾಲ್ ಮುಂಭಾಗದಲ್ಲಿ ಮದುವೆ ಸಮಾರಂಭಕ್ಕಾಗಿ ಹಾಕಲಾಗಿದ್ದ ಬೃಹತ್ ಶಾಮಿಯಾನ ಹಾರಿಹೋಗಿದೆ. ದಿಢೀರ್ ಎಂದು ಅಪ್ಪಳಿಸಿದ ಬಿರುಗಾಳಿ ಹಾಗೂ ಮಳೆಗೆ ಶಾಮಿಯಾನಗಳು ಉರುಳಿಬಿದ್ದಿದ್ದು, ಮದುವೆಗೆ ಆಗಮಿಸಿದ್ದ ಅತಿಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಒಂದೆಡೆ ಮದುವೆಯ ಸಂಭ್ರಮವಿದ್ದರೆ, ಮತ್ತೊಂದೆಡೆ ವರುಣನ ಅನಿರೀಕ್ಷಿತ ಆರ್ಭಟ ಹಾಗೂ ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

Edited By :
PublicNext

PublicNext

22/10/2026 08:17 pm

Cinque Terre

14.46 K

Cinque Terre

0

ಸಂಬಂಧಿತ ಸುದ್ದಿ