ಚಿಕ್ಕಮಗಳೂರು: ಕಾಫಿನಾಡಿನ ಮುತ್ತೋಡಿ-ಶಿರವಾಸೆ ರಸ್ತೆಯಲ್ಲಿ ದಿಢೀರನೆ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ವಾಹನ ಸವಾರರು ಬೆಚ್ಚಿಬೀಳುವಂತೆ ಮಾಡಿದೆ. ರಸ್ತೆಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿರುವ ಈ ವ್ಯಾಘ್ರನ ಓಡಾಟದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಭದ್ರಾ ಹುಲಿ ಸಂರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಶಿರವಾಸೆ ಗ್ರಾಮದ ಕಡೆಗೆ ಕಾಡು ಬಿಟ್ಟು ಹುಲಿ ಸಂಚರಿಸುತ್ತಿರುವುದು ಇದೀಗ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅರಣ್ಯದಂಚಿನಿಂದ ಜನವಸತಿ ಪ್ರದೇಶದತ್ತ ಹುಲಿ ಮುಖಮಾಡಿರುವುದರಿಂದ, ಭದ್ರಾ ಅಭಯಾರಣ್ಯದ ಅಂಚಿನಲ್ಲಿರುವ ಶಿರವಾಸೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆ ಪ್ರಾಣಭೀತಿಯಲ್ಲಿ ದಿನದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
PublicNext
29/10/2026 02:16 pm
LOADING...