ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಶಾಸಕ ಮಾನಪ್ಪ ವಜ್ಜಲ್ ಕಾರು ಅಪಘಾತ

ರಾಯಚೂರು: ಜಿಲ್ಲೆಯ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಕಾರು ಅಪಘಾತವಾಗಿದ್ದು, ಅವರ

ಸಹೋದರ ನಾಗಪ್ಪ ವಜ್ಜಲ್ ಪುತ್ರ ಮಲ್ಲು ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಬೀದರ್ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಹೊನ್ನಹಳ್ಳಿಬೆಂಬ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಥಾರ್ ಹಾಗೂ ಮಹೀಂದ್ರಾ ಎಕ್ಸ್ ಯುವಿ ಕಾರುಗಳ ನಡುವೆ ನಡೆದ ಈ ಭೀಕರ ಅಪಘಾತದಲ್ಲಿ ಎರಡೂ ಕಡೆಯವರಿಗೂ ಗಂಭೀರ ಗಾಯಗಳಾಗಿವೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ಈ ಕುರಿತು ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Edited By :
PublicNext

PublicNext

22/10/2026 10:51 pm

Cinque Terre

13.34 K

Cinque Terre

0