ರಾಯಚೂರು: ಪೆಟ್ರೋಲ್ ಬಂಕ್ ನಲ್ಲಿ ಪಲ್ಸರ್ ಬೈಕ್ ಗೆ ಬೆಂಕಿರಾಯಚೂರು : ಪೆಟ್ರೋಲ್ ಬಂಕ್ ನಲ್ಲಿ ಪಲ್ಸರ್ ಬೈಕ್ ಗೆ ಬೆಂಕಿ ಬಿದ್ದಿದ್ದು ದೊಡ್ಡ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮಾನ್ವಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಘಟನೆ ನಡೆದಿದೆ.
ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಗೆ ಪೆಟ್ರೋಲ್ ಹಾಕಿಸಲು ಬಂದಿದ್ದ ಪಲ್ಸರ್ 220 ಬೈಕ್ ಗೆ ಏಕಾಏಕಿ ಬೆಂಕಿ ತಗುಲಿದೆ. ಕ್ಷಣ ಮಾತ್ರದಲ್ಲಿ ಇಡೀ ಬೈಕ್ ಸುಟ್ಟು ಭಸ್ಮ ಆಗಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಟ್ಟ ಹೊಗೆ ಆವರಿಸಿತ್ತು. ಪೆಟ್ರೋಲ್ ಬಂಕ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲಕಾಲ ಆತಂಕ ಉಂಟಾಗಿತ್ತು.
ಅದೃಷ್ಟವಶಾತ್ ಅಲ್ಲೇ ಇದ್ದ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಸ್ಥಳೀಯರಿಂದ ಸಮಯಪ್ರಜ್ಞೆ ಮೆರೆಯಲಾಗಿದೆ. ಮರಳು, ನೀರು ಮತ್ತು ಅಗ್ನಿಶಾಮಕ ಉಪಕರಣಗಳಿಂದ ಬೆಂಕಿ ಹತೋಟಿಗೆ ತಂದಿದ್ದಾರೆ.
PublicNext
29/10/2026 12:37 pm
LOADING...