ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಹೂತಿದ್ದ ಶವದ ಮೂಳೆ ಕದ್ದು ಮಾರಾಟ!; ಸತ್ತರೂ ತಪ್ಪದ ಕಳ್ಳರ ಕಾಟ

ರಾಯಚೂರು: ಶವ ಸಂಸ್ಕಾರ ಮಾಡಿ 6 ತಿಂಗಳ ಬಳಿಕ ಮೂಳೆ ಕಳವು ಮಾಡಿರೋ ಗಂಭೀರ ಆರೋಪ ರಾಯಚೂರಿನಲ್ಲಿ ನಡೆದಿದೆ. ಹೂತಿದ್ದ ಶವ ತೆಗೆದು ಮೂಳೆ ಹೊರ ತೆಗೆದು ಒಯ್ಯುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೂಳೆ ಕಳ್ಳತನ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿದ ಸ್ಥಳೀಯರು, ಮೂಳೆ ಕದ್ದು ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿಗೆ ಮಾರಾಟ ಮಾಡಿರೋ ಆರೋಪ ಕೇಳಿ ಬಂದಿದೆ. ಖಾಸಗಿ ಮೆಡಿಕಲ್ ಕಾಲೇಜಿಗೆ ಮೂಳೆಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಇದೆ.

ವೀರೇಶ ತಳವಾರ ಎಂಬುವವ ಮತ್ತು ಆತನ ಸ್ನೇಹಿತರಿಂದ‌ ಕೃತ್ಯ ಎಸೆಗಲಾಗಿದೆ. ಮೂಳೆ ಕದ್ದು 500 ರೂಪಾಯಿಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡ ವೀರೇಶ್, 500 ರೂಪಾಯಿಗೆ ಮೂಳೆ ಮಾರಿ ಮದ್ಯ ಸೇವಿಸುತ್ತಿದ್ದುದಾಗಿ ಹೇಳಿದ್ದಾನಂತೆ.

ಇದೊಂದು ಗಂಭೀರ ಪ್ರಕರಣವಾಗಿದ್ದು, ಸತ್ತವರನ್ನೂ ನೆಮ್ಮದಿಯಾಗಿ ಬಿಡದ ಜನರನ್ನು ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ. ಇತ್ತ ಮೂಳೆ ಖರೀದಿ ಮಾಡುತ್ತಿದ್ದವರ ಮೇಲೂ ಕ್ರಮಕ್ಕೆ ಆಗ್ರಹ ಹೆಚ್ಚಾಗಿದ್ದು,

ಸಮಗ್ರ ತನಿಖೆಗೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

Edited By : Somashekar
PublicNext

PublicNext

24/10/2026 10:06 pm

Cinque Terre

15.09 K

Cinque Terre

0