ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಮುಂದುವರಿದ ಮಳೆಯ ಅಬ್ಬರ - ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮಲೆನಾಡಿನಗಿಂತಲೂ ಬಯಲುಸೀಮೆ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಗುರುವಾರ ಸಂಜೆಯಿಂದಲೇ ಜಿಲ್ಲೆಯ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸತತ ಮೂರು ಗಂಟೆಗಳ ಕಾಲ ಬಿಡುವು ನೀಡದೆ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ಪ್ರಮುಖ ಸ್ಥಳಗಳಾದ ಚಿಕ್ಕಮಗಳೂರು, ತರೀಕೆರೆ ಹಾಗೂ ಕಡೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ವಿಶೇಷವಾಗಿ ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆ ಪ್ರದೇಶಗಳಾದ ಬೆಳವಾಡಿ ಮತ್ತು ಕಳಸಾಪುರ ಸುತ್ತಮುತ್ತಲಿನ ಭಾಗದಲ್ಲೂ ಭಾರಿ ಮಳೆಯಾಗಿದ್ದು, ಒಣಹವೆ ಮುಂದುವರಿದಿದ್ದ ಪ್ರದೇಶಗಳಲ್ಲಿ ಮಳೆ ತಂಪೆರೆದಿದೆ.

ಮಲೆನಾಡಿನ ಕೆಲ ಭಾಗಗಳಲ್ಲೂ ಮಳೆಯ ಸುರಿದಿದ್ದು, ಈ ಬಾರಿ ಕಾಫಿನಾಡಿಗೆ ವಾಡಿಕೆ ಮಳೆಯ ಅರ್ಧದಷ್ಟು ಮಳೆಯೂ ಆಗದೆ ರೈತರು ಮತ್ತು ಜನಸಾಮಾನ್ಯರು ಮಳೆಗಾಗಿ ಆಕಾಶದತ್ತ ಮುಖ ಮಾಡಿ ಕಾಯುವಂತಾಗಿತ್ತು. ಸದ್ಯದ ಈ ವಾತಾವರಣದಿಂದಾಗಿ ಕಾಫಿನಾಡಿನಲ್ಲಿ ಉತ್ತಮ ಹಿಂಗಾರು ಮಳೆಯಾಗುವ ಬಲವಾದ ನಿರೀಕ್ಷೆ ಮೂಡಿದೆ.

Edited By :
PublicNext

PublicNext

23/10/2026 10:20 pm

Cinque Terre

9.15 K

Cinque Terre

0

ಸಂಬಂಧಿತ ಸುದ್ದಿ