ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು ತೋಟದ ಕಾರ್ಮಿಕರಿಗೆ ವೇತನ ಏರಿಕೆ ಖುಷಿ..! ಸರ್ಕಾರದ ಮಾನದಂಡಕ್ಕಿಂತ ಶೇ.4ರಷ್ಟು ಅಧಿಕ ವೇತನಕ್ಕೆ ಒಪ್ಪಂದ

ಚಿಕ್ಕಮಗಳೂರು: ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಹಾಗೂ ತೋಟ ಕಾರ್ಮಿಕರ ಸಂಘಟನೆಗಳ ಮಧ್ಯೆ ವೇತನ ಒಪ್ಪಂದದ ಕುರಿತು ಜಂಟಿ ಕಾರ್ಮಿಕ ಸಂಘಟನೆ ಸಮಿತಿಯ ಸಂಚಾಲಕರಾದ ಧರ್ಮರಾಜು ಅವರು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ತೋಟ ಕಾರ್ಮಿಕರ ಹಿತದೃಷ್ಟಿಯಿಂದ ಜಂಟಿ ಕಾರ್ಮಿಕ ಸಂಘಟನೆಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಈ ಬಾರಿ ಸರ್ಕಾರದ ವೇತನಕ್ಕಿಂತ ಶೇಕಡಾ ನಾಲ್ಕರಷ್ಟು ಹೆಚ್ಚು ವೇತನವನ್ನು ಒಪ್ಪಂದ ಮಾಡಿಕೊಳ್ಳಲಾಗಿದೆ. 2026ರ ಏಪ್ರಿಲ್ 1ನೇ ತಾರೀಕಿನಿಂದ ಅನ್ವಯವಾಗುವಂತೆ ನಾನ್‌ಸ್ಟಾಪ್‌ಗಳಿಗೆ ಶೇಕಡಾ 17ರಷ್ಟು ಹಾಗೂ ಸೂಪರ್‌ವೈಸರ್‌ಗಳಿಗೆ ಶೇಕಡಾ 16ರಷ್ಟು ವೇತನ ಹೆಚ್ಚಳ ಮಾಡಲಾಗಿದ್ದು, ಇದು ನಾಲ್ಕು ವರ್ಷಗಳ ಅವಧಿಯ ಒಪ್ಪಂದವಾಗಿದೆ. ಕಂಪನಿ ಎಸ್ಟೇಟ್‌ಗಳಲ್ಲಿ ಈ ಒಪ್ಪಂದಗಳು ಸರಿಯಾಗಿ ಜಾರಿಯಾಗುತ್ತಿPದ್ದರೂ, ಶೇಕಡಾ 80ರಷ್ಟಿರುವ ಸಣ್ಣ ಬೆಳೆಗಾರರ ತೋಟಗಳಲ್ಲಿ ಕಾರ್ಮಿಕರ ಸೌಲಭ್ಯ ಹಾಗೂ ವೇತನ ವಿತರಣೆಯಲ್ಲಿ ಕೆಲವೊಮ್ಮೆ ವಿಳಂಬವಾಗುತ್ತಿದೆ. ಕಾರ್ಮಿಕ ಇಲಾಖೆಯು ಈ ಬಗ್ಗೆ ಸೂಕ್ತ ತನಿಕೆ ನಡೆಸಿ, ಎಲ್ಲ ಕಾರ್ಮಿಕರಿಗೂ ಇದರ ಸಂಪೂರ್ಣ ಲಾಭ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Edited By :
PublicNext

PublicNext

24/10/2026 03:40 pm

Cinque Terre

4.56 K

Cinque Terre

0

ಸಂಬಂಧಿತ ಸುದ್ದಿ