ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕ್ಷಿತರೇ ಹೆಚ್ಚು ಜಾತಿಯತೆ ಮಾಡುವುದು : ಮಾಜಿ ಸಿಎಂ ಸಿದ್ದರಾಮಯ್ಯ

ಚಾಮರಾಜನಗರ : ಎರಡು ದಿನಗಳ ಚಾಮ ರಾಜನಗರದಲ್ಲಿ‌ ನಡೆದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನವು ಭಾನುವಾರ ಸಂಜೆ ಸಂಪನ್ನಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿ, ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆದಿರುವುದು ಸಂತಸದ ವಿಚಾರ, ಜನರಿಗೆ ಬೌದ್ಧ ಧರ್ಮವನ್ನು ವಿಚಾರಗಳ ಮೂಲಕ ತಿಳಿಸಲಾಗಿದೆ,  ಇವತ್ತಿಗೂ ಕೂಡ ಬುದ್ಧ, ಬಸವ, ಅಂಬೇಡ್ಕರ್ ಪ್ರಸ್ತುತ ಎಂದರು.

ಮಾನವೀಯತೆ, ಸಾಮಾಜಿಕ ನ್ಯಾಯ, ಪ್ರೀತಿ ಇರಬೇಕೆಂದು ಎಲ್ಲ ದಾರ್ಶನಿಕರ ಮಾತಾಗಿದೆ. ಹಿಂದೂ ಧರ್ಮದಲ್ಲಿರುವ  ತಾರತಮ್ಯ ಹೋಗಲಾಡಿಸಲು ಪ್ರಯತ್ನ ಮಾಡಿದ್ದಾರೆ. ಜೈನ-ಬೌದ್ಧ ಧರ್ಮಗಳೆರಡೂ ಮನುಷ್ಯರಿಗೆ ದುಃಖ, ನೋವು ಹೋಗಲಾಡಿಸುವ ಬಗೆ ತಿಳಿಸಿವೆ. ಸಮಾಜದಲ್ಲಿ ದುಃಖವೂ ಇದೆ, ನೋವು ಇದೆ. ಇದರ ಪರಿಹಾರಕ್ಕೆ ಬುದ್ಧನೇ ಪರಿಹಾರ ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ಅತಿಯಾಸೆಯೇ ದುಃಖಕ್ಕೆ ಕಾರಣ ಎಂದು ಬುದ್ಧ ಹೇಳಿದ್ದಾರೆ. ಹಿಂದೂ ಧರ್ಮ ಸುಧಾರಣೆಯಾಗದಿದ್ದರಿಂದ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿದರು. ಬಹಳ ಪ್ರಯುತ್ನಿಸಿದರೂ ಸಮಾಜದ ಅಸಮಾನತೆ ಹೋಗಲಾಡಿಸಲಾಗಲಿಲ್ಲ, ಸಮಾನತೆಯ ಸಮಾಜ ಬರಬೇಕಾದರೇ ತಾರತಮ್ಯ ಹೋಗಬೇಕು ಎಂದು ಹೇಳಿದರು.

ಶಿಕ್ಷಣದಿಂದ ವಂಚಿತರಾದ ಜನರು ದಡ್ಡರಲ್ಲ ಆದರೆ ಅವಕಾಶ ಸಿಗಲಿಲ್ಲ.

ಶಿಕ್ಷಣ, ಸಂಘಟನೆ, ಹೋರಾಟದಿಂದ ಸಮ ಸಮಾಜ ನಿರ್ಮಾಣ ಸಾಧ್ಯ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಶಕ್ತಿ ಬರದಿದ್ದರೇ ಸಮ ಸಮಾಜ ಅಸಾಧ್ಯ. ಆದರೆ, ತಾನು 13 ಚುನಾವಣೆ ಎದುರಿಸಿದ್ದು 

ಚುನಾವಣೆಯಲ್ಲಿ ಶಿಕ್ಷಿತರೇ ಹೆಚ್ಚು ಜಾತಿ ಮಾಡುವುದು. ಶೇ. 80 ರಷ್ಟು ಶಿಕ್ಷಿತರಿದ್ದರೂ  ಕೂಡ ತಮ್ಮ ತಮ್ಮ ಜಾತಿಗೇ ಮತ ಹಾಕುತ್ತೇವೆ ಎನ್ನುತ್ತಾರೆ. ಶಿಕ್ಷಣ ಪಡೆದವರೂ ಕೂಡ ವೈಜ್ಞಾನಿಕವಾಗಿ ಯೋಚಿಸುತ್ತಿಲ್ಲ. ಶಿಕ್ಷಣ ವೈಚಾರಿಕವಾಗಿರ ಬೇಕು. ವೈಜ್ಞಾನಿಕವಾಗದಿದ್ದರೆ ವ್ಯವಸ್ಥೆ ಬದಲಾಗಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಬುದ್ಧ, ಬಸವಣ್ಣ ಮೌಢ್ಯ ಹಾಗೂ ಕಂದಾಚಾರದಲ್ಲಿ ನಂಬಿಕೆ ಇಟ್ಟಿರಲಿಲ್ಲ.

ಎಲ್ಲಾ ಸರ್ಕಾರಗಳು ಸಂವಿಧಾನ ಬದ್ದವಾಗಿ ನಡೆಯಬೇಕು. ಸಂವಿಧಾನ ಜಾರಿಯಾಗಿ 7 ದಶಕ ಕಳೆದರೂ ಸಮಾನತೆ ಬಂದಿಲ್ಲ. ಸಮಾನ ಅವಕಾಶ ಸಿಕ್ಕಿಲ್ಲ. ನನ್ನ ಅಧಿಕಾರವಧಿಯಲ್ಲಿ ಅಸಮಾನತೆ ನಿವಾರಣೆ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿರುವೆ ಎಂದು ಹೇಳಿದರು.

Edited By : PublicNext Desk
PublicNext

PublicNext

25/10/2026 08:16 pm

Cinque Terre

794

Cinque Terre

0

ಸಂಬಂಧಿತ ಸುದ್ದಿ