ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಕಾಲೇಜು ವಿದ್ಯಾರ್ಥಿನಿಯರ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ ಡಾಲಿ ಧನಂಜಯ್‌

ಚಾಮರಾಜನಗರ: ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 111ನೇ ಜಯಂತಿ ಮಹೋತ್ಸವದಲ್ಲಿ ಸ್ಯಾಂಡಲ್‌ವುಡ್ ನಟ ‘ಡಾಲಿ’ ಧನಂಜಯ್ ಅವರ ಉಪಸ್ಥಿತಿ ಯುವಜನತೆಯಲ್ಲಿ ಹೊಸ ಚೈತನ್ಯ ಮೂಡಿಸಿತು. ನಟ ಧನಂಜಯ್ ವೇದಿಕೆಗೆ ಆಗಮಿಸುತ್ತಿದ್ದಂತೆ ಕಾಲೇಜು ವಿದ್ಯಾರ್ಥಿನಿಯರು ‘ಡಾಲಿ, ಡಾಲಿ’ ಎಂದು ಆರ್ಭಟಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಧನಂಜಯ್ ಅವರು ‘ಅಣ್ಣ ಫ್ರಮ್ ಮೆಕ್ಸಿಕೊ’ ಚಿತ್ರದ ‘ಪುಟ್ಟಮಲ್ಲಿ’ ಹಾಡಿಗೆ ವಿದ್ಯಾರ್ಥಿನಿಯರೊಂದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದಂತೆ ಇಡೀ ಮೈದಾನವೇ ಸಂಭ್ರಮದ ಕಡಲಲ್ಲಿ ತೇಲಿತು. ನೆಚ್ಚಿನ ನಟನೊಂದಿಗೆ ಸೆಲ್ಫಿ ಪಡೆದುಕೊಳ್ಳಲು ವಿದ್ಯಾರ್ಥಿನಿಯರು ಮುಗಿಬಿದ್ದಿದ್ದು, ಅವರನ್ನು ನಿಯಂತ್ರಿಸಲು ಆಯೋಜಕರು ಹಾಗೂ ಪೊಲೀಸರು ಹರಸಾಹಸ ಪಡುವಂತಾಯಿತು. ಧನಂಜಯ್ ಅವರ ಮಾಸ್ ಎಂಟ್ರಿ ಮತ್ತು ಬಿಂದಾಸ್ ಡ್ಯಾನ್ಸ್ ಜಯಂತ್ಯುತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿತು.

Edited By :
PublicNext

PublicNext

04/11/2026 03:21 pm

Cinque Terre

4.71 K

Cinque Terre

0

ಸಂಬಂಧಿತ ಸುದ್ದಿ