ಇಂದು ಜಿಲ್ಲಾ ಖಜಾನೆಯಿಂದ ಹಾಸನಾಂಬ ದೇಗುಲಕ್ಕೆ ದೇವಿಯ ಒಡವೆ ರವಾನೆ ಮಾಡಲಾಗಿದೆ.. ಅಲಂಕೃತ ವಾಹನದಲ್ಲಿ ದೇವಿಯ ಒಡವೆ-ಆಭರಣ ರವಾನೆ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ ನಲ್ಲಿ ಒಡವೆ ಜಿಲ್ಲಾಡಳಿತ ತಂದಾಗ ಒಡವೆ ಬಾಕ್ಸ್‌ಗೆ ಅಧಿಕಾರಿ ಜಗದೀಶ್ ಗಂಗಣ್ಣನವರ್ ಪೂಜೆ ಸಲ್ಲಿಸಿದ್ದಾರೆ.
ಹಾಸನ ನಗರದ ಆಕಾಶವಾಣಿ ಸಮೀಪದ ಜಿಲ್ಲಾ ಖಜಾನೆಯಲ್ಲಿದ್ದ ದೇವಿ ಒಡವೆ ಹಾಸನಾಂಬ ದೇಗುಲಕ್ಕೆ ತಲುಪಿಸಲಾಗಿದೆ. ಹಾಸನಾಂಬ ದೇಗುಲದ ಆವರಣದಲ್ಲಿರುವ ಭದ್ರತಾ ಕೊಠಡಿಯಲ್ಲಿಟ್ಟು ಒಡವೆಗೆ ಇಂದಿನಿಂದ ಪೂಜೆ ನಡೆಯುತ್ತೆ. ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ನಡೆಯಲಿರೋ ಹಾಸನಾಂಬ ಜಾತ್ರಾ ಮಹೋತ್ಸವ ಪ್ರಯುಕ್ತ ಸಖಲ ತಯಾರಿ ಮಾಡಿ ಕೊಳ್ಳಲಾಗಿದೆ.
PublicNext
27/10/2026 08:39 am
LOADING...