ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಜಿಲ್ಲಾ ಮಟ್ಟದ ಪ್ರಬಂಧಕರ ಶ್ರೇಣಿಯ ಸಿಬ್ಬಂದಿಗಳ ಸಭೆ

ಹಾಸನ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ಕಚೇರಿಯ ಹಾಸನ ಜಿಲ್ಲಾ ಕಚೇರಿಯಲ್ಲಿ ನವೆಂಬರ್ 4ರಂದು ಜಿಲ್ಲಾ ಮಟ್ಟದ ಪ್ರಬಂಧಕರ ಶ್ರೇಣಿಯ ಸಿಬ್ಬಂದಿಗಳ ಸಭೆ ನಡೆಯಿತು.

ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಾಸನ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹಾಗೂ ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿ ರಾಮಣ್ಣ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ತಾಲೂಕುಗಳ ಹಣಕಾಸು ಪ್ರಬಂಧಕರು ಹಾಗೂ ಜಿಲ್ಲಾ ಕಚೇರಿಯ ಪ್ರಬಂಧಕ ಶ್ರೇಣಿಯ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಲೆಕ್ಕಪತ್ರ ನಿರ್ವಹಣೆ, ಕಾರ್ಯಕ್ಷೇತ್ರಕ್ಕೆ ಸಲ್ಲಿಸಬೇಕಾದ ವರದಿಗಳು, ಆಡಳಿತ ನಿರ್ವಹಣೆ, ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸುವ ವಿಧಾನ, ಲಾಭಾಂಶ ವಿತರಣೆ ಹಾಗೂ ಇಮೇಜ್ ವೆರಿಫಿಕೇಷನ್ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.

ಯೋಜನೆಯ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವುದು, ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ಸಮನ್ವಯ ಸಾಧಿಸುವ ಉದ್ದೇಶದಿಂದ ಸಭೆ ಆಯೋಜಿಸಲಾಗಿತ್ತು.

Edited By :
PublicNext

PublicNext

05/11/2026 10:30 am

Cinque Terre

1.42 K

Cinque Terre

0