ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ : ಈಶಾನ್ಯ ಶಿಕ್ಷಕರ ಮತ ಎಣಿಕೆ ಕಾರ್ಯ ಹಿನ್ನೆಲೆ- ಸ್ಟ್ರಾಂಗ್ ರೂಂ ಓಪನ್

ಕಲಬುರಗಿ : ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಭಾಸ್ಕರ್ ಹಾಲ್‌ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಹದಿನಾಲ್ಕು ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿಯಾದ ಜಹೀರಾ ನಸೀಮ್ ಅವರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದ್ದು, ಮತಪೆಟ್ಟಿಗೆಗಳ ಸಮೇತ ಎಣಿಕೆಗಾಗಿ ಸಿಬ್ಬಂದಿ ತೆರಳುತ್ತಿದ್ದಾರೆ.

ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ್ ಹಾಗೂ ಬಿಜೆಪಿಯ ಶಶೀಲ್ ನಮೋಶಿ ನಡುವೆ ತೀವ್ರ ಪೈಪೋಟಿ ಇದ್ದು, ಚುನಾವಣಾ ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳಿರುವುದರಿಂದ ವಿಧಾನ ಪರಿಷತ್ತಿಗೆ ಯಾರು ಹೋಗುತ್ತಾರೆ ಎನ್ನುವ ತೀವ್ರ ಕುತೂಹಲದ ಪ್ರಶ್ನೆಗೆ ಇಂದು ತೆರೆ ಬೀಳಲಿದೆ.

Edited By : PublicNext Desk
Kshetra Samachara

Kshetra Samachara

27/10/2026 09:54 am

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ