ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೂಲೇನಹಳ್ಳಿ ಗ್ರಾಮದ ಜನರಿಗೆ ಚರಂಡಿ ನೀರಿನ ದಿಗ್ಬಂಧನ- ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನರು ಹೈರಾಣು

ಚಿತ್ರದುರ್ಗ : ಹೀಗೆ ಕೊಳಚೆ ನೀರಿನಿಂದ ಭರ್ತಿಯಾಗಿರುವ ಗ್ರಾಮದ ಚರಂಡಿಗಳು. ಇನ್ನೊಂದು ಕಡೆ ಚರಂಡಿ ನೀರು ನಿಂತು ಕೆರೆಯಂತಾಗಿರುವ ರಸ್ತೆಗಳು. ಮತ್ತೊಂದು ಕಡೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನರಳುತ್ತಿರುವ ಗ್ರಾಮಸ್ಥರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಸೂಲೇನಹಳ್ಳಿ ಗ್ರಾಮ.

ಹೌದು, ಮೊಳಕಾಲ್ಮೂರು ತಾಲ್ಲೂಕು ಕೇಂದ್ರದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿರುವ ಗ್ರಾಮದ ಚಿತ್ರಣವಿದು. ಕಳೆದ 2 ವರ್ಷಗಳಿಂದ ಗ್ರಾಮದ ಚರಂಡಿ ನೀರು ಹೊರಗೆ ಹೋಗಲು ಮಾರ್ಗ ಬಂದ್ ಆಗಿದೆ. ಖಾಸಗಿ ಜಮೀನು ಮಾಲೀಕರು ಚರಂಡಿ ನೀರು ಹೊರಹೋಗಲು ತಮ್ಮ ಜಮೀನುಗಳಲ್ಲಿ ಚರಂಡಿ ನಿರ್ಮಿಸಲು ಜಾಗ ನೀಡುತ್ತಿಲ್ಲ. ಇದೇ ಕಾರಣಕ್ಕೆ ಊರಿನಲ್ಲೇ ಚರಂಡಿ ನೀರು ಬ್ಲಾಕ್ ಆಗಿದ್ದು, ಕೊಳಚೆ ನೀರಿನಿಂದ ಗ್ರಾಮ ಗಬ್ಬೆದ್ದು ನಾರುತ್ತಿದೆ.

ಇಡೀ ಗ್ರಾಮಕ್ಕೆ ಚರಂಡಿ ನೀರಿನ ದಿಗ್ಬಂಧನ ಎದುರಾಗಿದ್ದು, ಗಲೀಜು ನೀರಿನ ನಡುವೆ ಜನರು ಬದುಕು ನಡೆಸುತ್ತಿದ್ದಾರೆ. ಇಡೀ ಊರನ್ನೇ ಚರಂಡಿ ನೀರು ಸುತ್ತುವರೆದಿದ್ದು, ಚರಂಡಿಗಳು ಕೂಡ ಸಂಪೂರ್ಣ ಭರ್ತಿಯಾಗಿವೆ. ಇದರಿಂದ ಚರಂಡಿಗಳು ತುಂಬಿ ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದು, ರಸ್ತೆಗಳು ಕೂಡ ಕೆರೆಗಳಂತಾಗಿವೆ. ಇದೇ ನೀರಿನಲ್ಲಿ ಸೂಲೇನಹಳ್ಳಿ ಗ್ರಾಮದ ಜನರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

Edited By :
PublicNext

PublicNext

28/10/2026 10:03 pm

Cinque Terre

10.69 K

Cinque Terre

0

ಸಂಬಂಧಿತ ಸುದ್ದಿ