ಚಿತ್ರದುರ್ಗ: ಹೀಗೆ ಮಂಚದ ಮೇಲೆ ಹೆಣವಾಗಿ ಮಲಗಿರುವ ವ್ಯಕ್ತಿಯ ಹೆಸರು 55 ವರ್ಷದ ರೈತ ರಾಮಚಂದ್ರಪ್ಪ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ನಿವಾಸಿ. ತಾನಾಯ್ತು ತನ್ನ ಕೆಲಸ ಆಯ್ತು ಅಂತ ಜಮೀನಿನಲ್ಲೇ ಮನೆ ಕಟ್ಟಿಕೊಂಡು ವಾಸವಿದ್ದ. ಆದ್ರೆ ನಿನ್ನೆಇಡೀ ದಿನ ಜಮೀನಿನಲ್ಲೇ ಬೆವರು ಸುರಿಸಿದ್ದ ರೈತ ರಾಮಚಂದ್ರಪ್ಪ, ತಡರಾತ್ರಿ ತೋಟದ ಮನೆಯಲ್ಲೇ ತಂಗಿದ್ದ.
ರಾತ್ರಿ 8 ಗಂಟೆ ಸುಮಾರಿಗೆ ಊಟ ಮುಗಿಸಿ, ನಿದ್ರೆಗೆ ಜಾರಿದ್ದ ರಾಮಚಂದ್ರಪ್ಪನ ಮೇಲೆ ಮಧ್ಯರಾತ್ರಿ ಒಂಟಿ ಚಿರತೆಯೊಂದು ಅಟ್ಯಾಕ್ ಮಾಡಿತ್ತು. ಮನೆ ಮುಂಭಾಗದ ಮಂಚದ ಮೇಲೆ ಮಲಗಿದ್ದವನ ಮೇಲೆ ಏಕಾಏಕಿ ಎರಗಿದ್ದು, ನಿದ್ರೆಯಿಂದ ಏಳುವ ಮುನ್ನವೇ ರೈತ ರಾಮಚಂದ್ರಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇನ್ನೂ ಬೆಳಿಗ್ಗೆ ಒಂಟಿ ಚಿರತೆಯ ರಾಕ್ಷಸ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ದೊಡ್ಡ ಚೆಲ್ಲೂರು ಗ್ರಾಮದ ಸುತ್ತಲಿನ ಹಳ್ಳಿಗಳ ರೈತರು ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಚಿರತೆ ದಾಳಿಯಿಂದ ರೈತ ರಾಮಚಂದ್ರಪ್ಪ ಸಾವನ್ನಪ್ಪಿದ್ದನ್ನು, ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೂ ಈ ಘಟನೆಯ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಕಳೆದ 6 ತಿಂಗಳಿಂದ ಚಿರತೆ ಉಪಟಳಕ್ಕೆ ಈ ಭಾಗದ ಜನ್ರು ಬೇಸತ್ತು ಹೋಗಿದ್ರು. ಈ ಹಿಂದೆ ಕೂಡಾ ಇಬ್ಬರು ಕುರಿಗಾಯಿಗಳ ಮೇಲೆ ಚಿರತೆ ಅಟ್ಯಾಕ್ ಮಾಡಿತ್ತು. ಆದ್ರೂ ಕೂಡಾ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಮುಂದಾಗಿಲ್ಲ, ಇದರಿಂದ ಓರ್ವ ರೈತನ ಸಾವಾಗಿದೆ ಅನ್ನೋದು ಸ್ಥಳೀಯರ ಆರೋಪವಾಗಿದೆ. ಇನ್ನೂ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪರಶುರಾಮಪುರ ಪೊಲೀಸರು ಕೂಡಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಗೆ ಬಲೆ ಬೀಸಿದ್ದಾರೆ.
ಒಟ್ಟಾರೆ ತಡರಾತ್ರಿ ಊಟ ಮುಗಿಸಿ ಅರಾಮವಾಗಿ ಮಲಗಿದ್ದ ರೈತನೋರ್ವ ಚಿರತೆ ಬಾಯಿಗೆ ಬಲಿಯಾಗಿದ್ದು, ನಿಜಕ್ಕೂ ದುರಂತ. ಇನ್ನಾದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಇಂಥ ಘಟನೆ ಮರುಕಳಿಸುವ ಮುನ್ನವೇ ಚಿರತೆ ಉಪಟಳಕ್ಕೆ ಬ್ರೇಕ್ ಹಾಕ್ಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.
PublicNext
04/11/2026 07:53 pm
LOADING...