ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೋನಿಗೆ ಬಿದ್ದ ಅರ್ಚಕನ ಕೊಂದ ಚಿರತೆ!

ರಾಮನಗರ :ಕೊನೆಗೂ ಅರಣ್ಯ ಇಲಾಖೆ ಬೋನಿಗೆ ನರಹಂತಕ ಚಿರತೆ ಬಿದ್ದಿದೆ. ಅರ್ಚಕನನ್ನ ಕೊಂದಿದ್ದ 100 ಮೀ ದೂರದಲ್ಲೇ ಚಿರತೆ ಸೆರೆ ಆಗಿದೆ. ಮಾಗಡಿ ತಾಲೂಕಿನ ಕಲ್ಲುದೇವಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಅ.12ರಂದು ಕಲ್ಲುದೇವನಹಳ್ಳಿ ಗ್ರಾಮದಲ್ಲಿ ಶಿವಸ್ವಾಮಿ(60) ಎಂಬ ಅರ್ಚಕ ಚಿರತೆ ದಾಳಿಯಿಂದ ಸಾವನ್ನಪ್ಪಿದ್ದ. ಅರ್ಚಕನನ್ನ ಕೊಂದು ಅಕ್ಕಪಕ್ಕದ ಗ್ರಾಮಗಳಲ್ಲೂ ಓಡಾಡಿ ಆತಂಕ ಸೃಷ್ಠಿಸಿದ್ದ ಚಿರತೆ, ಜನರ ಎದೆ ಬಡಿತ ಹೆಚ್ಚಿಸಿತ್ತು. ಚಿರತೆ ಸೆರೆಗೆ ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ವಿಫಲ ಆಗಿತ್ತು. ಇಂದು ಬೆಳಿಗ್ಗೆ ಅರ್ಚಕನನ್ನ ಕೊಂದಿದ್ದ 100 ಮೀ ದೂರದಲ್ಲೇ ಚಿರತೆ ಸೆರೆ ಆಗಿದೆ. ಸೆರೆಹಿಡಿದ ಚಿರತೆ ನೋಡಲು ಗ್ರಾಮಸ್ಥರು ಮುಗಿಬಿದ್ದ ಚಿತ್ರಣ ಕಂಡು ಬಂದಿದೆ.

Edited By :
PublicNext

PublicNext

29/10/2026 10:50 am

Cinque Terre

5.35 K

Cinque Terre

0