ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ : 150 ಅಡಿ ಬಟ್ಟೆಯ ಮೇಲೆ ಮೆಹಂದಿ ಚಿತ್ತಾರ - ಕೀರ್ತಿಗೆ ಎರಡು ದಾಖಲೆಗಳ ಗರಿ

ಯಾದಗಿರಿ : ಸಾಧನೆಗೆ ಸಾವಿರ ಸಾಧಿಸುವವನಿಗೆ ಸಾವಿಲ್ಲ ಎನ್ನುವಂತೆ ಇಲ್ಲೊಬ್ಬ ಯುವತಿ ಸಾಧನೆ ಮಾಡಿ ತೋರಿಸಿದ್ದಾಳೆ ನಿರಂತರವಾಗಿ 15 ಗಂಟೆ 45 ನಿಮಿಷಗಳ ಕಾಲ ಮೆಹಂದಿ ಚಿತ್ತಾರ ಬಟ್ಟೆ ಮೇಲೆ ಬಿಡಿಸುವ ಮೂಲಕ ಸಾಧನೆಯ ದಡ ಸೇರಿದ್ದಾಳೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದ ವಿದ್ಯಾರ್ಥಿನಿ ಕೀರ್ತಿ ನಿಂಗಣ್ಣ ಹೊಸಮನಿ ಮೆಹಂದಿ ಕಲೆಯಲ್ಲಿ ಅಸಾಧಾರಣ ಸಾಧನೆ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾಳೆ.

150 ಅಡಿ ಉದ್ದ ಮತ್ತು ಒಂದು ಅಡಿ ಅಗಲದ ಬಟ್ಟೆಯ ಮೇಲೆ 200 ಮೆಹಂದಿ ಕೋನ್‌ಗಳನ್ನು ಬಳಸಿ ಸತತ 15 ಗಂಟೆ 45 ನಿಮಿಷಗಳ ಕಾಲ ವಿವಿಧ ವಿನ್ಯಾಸಗಳನ್ನು ಮೂಡಿಸಿರುವುದು ಈ ಸಾಧನೆಯ ವಿಶೇಷವಾಗಿದೆ. ಸಾಂಪ್ರದಾಯಿಕ ಮಂಡಲ ಕಲೆ, ಫ್ರೀಹ್ಯಾಂಡ್ ಹಾಗೂ ಅರೇಬಿಕ್. ಬ್ರಿಡ್ ಮಂದಾರ,ಶೈಲಿಯ ವಿನ್ಯಾಸಗಳನ್ನು ಸಂಯೋಜಿಸಿ ಕಲಾಕೃತಿ ರಚಿಸಿದ್ದಾಳೆ.

ಹಸನಾಪುರದ ವೀರಪ್ಪ ನಿಷ್ಕ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕೀರ್ತಿ, ಓದಿನ ಜೊತೆಗೆ ಮೆಹಂದಿ ಕಲೆಯಲ್ಲೂ ತನ್ನ ಪ್ರತಿಭೆ ಅನಾವರಣಗೊಳಿಸಿದ್ದಾಳೆ. ಸ್ವಂತ ಆಸಕ್ತಿ, ನಿರಂತರ ಅಭ್ಯಾಸ, ತಾಳ್ಮೆ ಮತ್ತು ಏಕಾಗ್ರತೆಯಿಂದ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.

ಕೀರ್ತಿಯ ಸಾಧನೆಗೆ ದಾಖಲೆ ಸಂಸ್ಥೆಗಳು ಪ್ರಶಂಸಾ ಪ್ರಮಾಣಪತ್ರ ನೀಡಿ ಗೌರವಿಸಿವೆ. ಮಗಳ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದು, ಸತ್ಯಂಪೇಟೆ ಗ್ರಾಮದಲ್ಲಿ ಸಂತಸ ಮನೆಮಾಡಿದೆ. ಗ್ರಾಮೀಣ ಪ್ರತಿಭೆಗಳು ತಮ್ಮ ಆಸಕ್ತಿ ಮತ್ತು ಪರಿಶ್ರಮದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬುದಕ್ಕೆ ಕೀರ್ತಿ ಹೊಸಮನಿ ಸಾಧನೆ ಉತ್ತಮ ಉದಾಹರಣೆಯಾಗಿದೆ.

Edited By :
PublicNext

PublicNext

29/10/2026 01:59 pm

Cinque Terre

5.35 K

Cinque Terre

0

ಸಂಬಂಧಿತ ಸುದ್ದಿ