ಹಡಗಲಿ : ಕಾಲುಗಳೇ ಇಲ್ಲದೇ ನಡೆದಾಡುವ ಕನಸು ಕಂಡ ವಿಶೇಷಚೇತನ ವ್ಯಕ್ತಿಗೆ ಓಡಾಡುವ ಕನಸಿಗೆ ಶಾಸಕ ಕೃಷ್ಣಾ ನಾಯ್ಕ್ ರೆಕ್ಕೆ ಕೊಟ್ಟಿದ್ದಾರೆ. ವಿಶೇಷಚೇತನ ವ್ಯಕ್ತಿಗೆ ಡಿಜಿಟಲ್ ಹೈಟೆಕ್ ವೀಲ್ ರಿಮೋಟ್ ಕಂಟ್ರೋಲ್ ಚೇರ್ ತರಿಸಿಕೊಟ್ಟಿದ್ದಾರೆ.
ಬಿಜೆಪಿ ಶಾಸಕ ಕೃಷ್ಣಾ ನಾಯ್ಕ್ ಮಾನವೀಯ ನೆರವಿಗೆ ವಿಶೇಷಚೇತನ ವ್ಯಕ್ತಿ, ಚಿಕ್ಕ ಮಕ್ಕಳು ಆನಂದಬಾಷ್ಪದ ಅಭಿನಂದನೆ ಸಲ್ಲಿಸಿದ್ದಾರೆ. ಸೈಕಲ್, ಬೈಕ್ ಇಲ್ಲದೇ ನೆಲದಲ್ಲಿ ತೆವಳುತ್ತಾ ದಿನ ಕಳೆಯುತ್ತಿದ್ದ ವ್ಯಕ್ತಿ ಹಡಗಲಿ ಪಟ್ಟಣದ ಶಾಸಕರ ಕಚೇರಿಗೆ ವಿಶೇಷಚೇತನ ವ್ಯಕ್ತಿ ಬಂದಿದ್ರು. ವಿಶೇಷ ಚೇತನ ವ್ಯಕ್ತಿಯನ್ನ ನೋಡುತ್ತಿದ್ದಂತೆ ವ್ಯಕ್ತಿ ಬಳಿ ಬಂದು ಸಮಸ್ಯೆ ಆಲಿಸಿ ವಿಶೇಷಚೇತನ ವ್ಯಕ್ತಿಗೆ ಧೈರ್ಯ ತುಂಬಿ ವೀಲ್ ಚೇರ್ ಕೊಡಿಸುವ ಶಾಸಕ ಕೃಷ್ಣ ನಾಯಕ್ ಭರವಸೆ ನೀಡಿದ್ರು. ಆತನ ಮಕ್ಕಳಿಗೆ ಶಾಲೆಗೆ ಓದಿಸಲು ಆರ್ಥಿಕ ನೆರವು ನೀಡಲು ಶಾಸಕನ ಬಳಿ ವಿಶೇಷಚೇತನ ವ್ಯಕ್ತಿ ಮನವಿ ಮಾಡಿದ್ರು. ಅದಕ್ಕೂ ಸ್ಪಂದಿಸಿದ್ದ ಶಾಸಕ ವ್ಯಕ್ತಿಯ ಮನವಿಗೆ ಸ್ಪಂದಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಿ ಕೊಟ್ಟಿದ್ದಾರೆ. ಜೊತೆಗೆ ವಿಶೇಷಚೇತನ ವ್ಯಕ್ತಿಗೆ ಓಡಾಡಲು ಹೈಟೆಕ್ ಡಿಜಿಟಲ್ ರಿಮೋಟ್ ಕಂಟ್ರೋಲ್ ವೀಲ್ ಚೇರ್ ಕೊಟ್ಟಿದ್ದಾರೆ. ಶಾಸಕರು ಕೊಟ್ಟ ವೀಲ್‌ಚೇರ್ ನಲ್ಲಿ ಅಡ್ಡಾಡಿ ವಿಶೇಷಚೇತನ ವ್ಯಕ್ತಿ ಖುಷಿ ವ್ಯಕ್ತಪಡಿಸಿದ್ದಾರೆ. ಶಾಸಕರಿಗೆ ವೀಡಿಯೋ ಕಾಲ್ ಮಾಡಿ ಅನಂದಬಾಷ್ಪ ಸುರಿಸಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತೇವೆ ಅಂತಾ ಶಾಸಕ ಕೃಷ್ಣಾ ನಾಯ್ಕ್ ಭರವಸೆ ನೀಡಿದ್ರು.
PublicNext
29/10/2026 05:05 pm
LOADING...