ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಲ್ಪಕಲಾ ಕ್ಷೇತ್ರದ ಸಾಧಕ ಹೂವಿನ ಹಡಗಲಿಯ ಜಿ. ಬಿ ಹಂಸಾನಂದ ಆಚಾರ್ಯಗೆ 'ರಾಜ್ಯೋತ್ಸವ ಪಶಸಿ' ಗರಿ

ಹಡಗಲಿ : (ಇಟ್ಟಿಗಿ) ಮೂಲದ ಖ್ಯಾತ ಶಿಲ್ಪಿ ಜಿ.ಬಿ. ಹಂಸಾನಂದಾಚಾರ್ಯ ಅವರಿಗೆ ಕರ್ನಾಟಕ ಸರ್ಕಾರದ ಅತ್ಯುನ್ನತ 'ರಾಜ್ಯೋತ್ಸವ ಪ್ರಶಸ್ತಿ' ಲಭಿಸಿದ್ದು, ಜಿಲ್ಲೆಯ ಕಲಾಭಿಮಾನಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಹರ್ಷದ ವಾತಾವರಣ ಮೂಡಿಸಿದೆ.

ಬಡತನದಲ್ಲೂ ಕಲೆಯ ಸೇವೆಯಲ್ಲಿ ಸಾಗಿದ ಪಯಣ:

ರೂ.1932 ಆಗಸ್ಟ್ 2ರಂದು ಹಡಗಲಿಯ ಇಟ್ಟಿಗಿಯಲ್ಲಿ ಜನಿಸಿದ ಜಿ.ಬಿ. ಹಂಸಾನಂದಾ ಚಾರ್ಯ ಅವರಿಗೆ ಕಲೆ ಎಂಬುದು ತಂದೆ ಜಿ.ಬಿ. ವಿರುಪಾಕ್ಷಾಚಾರ್ಯ ಅವರಿಂದ ವಂಶ ಪಾರಂಪರ್ಯವಾಗಿ ಒಲಿದು ಬಂದ ಬಳುವಳಿಯಾಗಿದೆ. ಬಡತನದ ಕಾರಣದಿಂದಾಗಿ 7ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಇವರು, ಪ್ರವೃತ್ತಿ ಹಾಗೂ ವೃತ್ತಿಯಾಗಿ ಶಿಲ್ಪಕಲೆಯನ್ನೇ ನೆಚ್ಚಿಕೊಂಡು ಬದುಕನ್ನು ರೂಪಿಸಿಕೊಂಡರು.

ಬಹುಮುಖ ಪ್ರಾವೀಣ್ಯತೆ:

ಹೂವಿನಹಡಗಲಿಯ 'ಶ್ರೀ ಭುವನೇಶ್ವರೀ ಶಿಲ್ಪಕಲಾ ನಿಕೇತನ'ದ ಮೂಲಕ ಕಳೆದ ಹಲವು ದಶಕಗಳಿಂದ ಕಲಾ ಸೇವೆ ಸಲ್ಲಿಸುತ್ತಿರುವ ಇವರು ಶಿಲಾವಿಗ್ರಹ, ಕಾಷ್ಠ (ಮರ) ವಿಗ್ರಹ, ಲೋಹ ಎರಕ ಹಾಗೂ ಕವಚ, ಸಿಮೆಂಟ್ ಶಿಲ್ಪ, ದೇವಾಲಯ ಗೋಪುರ ಗಳು ಹಾಗೂ ಮಹಾದ್ವಾರಗಳ ನಿರ್ಮಾಣದಲ್ಲಿ ಅಪ್ರತಿಮ ಕೌಶಲ್ಯ ಮೆರೆದಿದ್ದಾರೆ.

ಪ್ರಮುಖ ಕಲಾ ಕೊಡುಗೆಗಳು:

ರಥ ಶಿಲ್ಪಗಳು, ಕೊಟ್ಟೂರು ಸುಕ್ಷೇತ್ರದ, ಪ್ರಸಿದ್ದ ಬೆಳ್ಳಿ ರಥ, ಶರಣ ಬಸವೇಶ್ವರ ರಥ, ಕೊಟ್ಟೂರೇಶ್ವರ ಬ್ರಹ್ಮರಥ, ಮರಬದ ವೀರಭದ್ರೇಶ್ವರ ತೇರು ಸೇರಿದಂತೆ 48ಕ್ಕೂ ಹೆಚ್ಚು ಆಕರ್ಷಕ ರಥಗಳನ್ನು ರೂಪಿಸಿದ್ದಾರೆ.

ವಿಗ್ರಹಗಳು: ಕಾಷ್ಠ, ಪಂಚಲೋಹ

ಅಮೃತ ಶಿಲೆ ಹಾಗೂ ಶಿಲೆಯಲ್ಲಿ ನೂರಾರು ವಿಗ್ರಹಗಳನ್ನು ಕಲ್ಪಿಸಿ ದೇಶ-ವಿದೇಶಗಳಲ್ಲಿ (ಜರ್ಮನಿಗೂ ಶಿಲ್ಪ ಕಳುಹಿಸಿದ್ದಾರೆ) ಪ್ರತಿಷ್ಠಾಪಿಸಿದ್ದಾರೆ.

ಇತರ ಕಲೆಗಳು, ಸಂಗೀತ ವಾದ್ಯಗಳ ತಯಾರಿಕೆ, ಸಂಗೀತ, ಸಾಹಿತ್ಯ, ನಾಟಕ, ವಾಸ್ತುಶಾಸ್ತ್ರ ಹಾಗೂ ಆಧ್ಯಾತ್ಮಿಕ ಚಿಂತನೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳ ಮುಡಿ:

ಜಿ.ಬಿ. ಹಂಸಾನಂದಾಚಾರ್ಯ ಅವರಿಗೆ ಈಗಾಗಲೇ ರಾಜ್ಯ ಸರ್ಕಾರ ದಿಂದ ಅತ್ಯುನ್ನತ 'ಜಕಣಾಚಾರಿ ಪ್ರಶಸ್ತಿ (2012)', ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ (2010), 'ಕರ್ನಾಟಕ ರತ್ನಶ್ರೀ' ಹಾಗೂ 'ಶಿಲ್ಪಕೌಸ್ತುಭ' ಬಿರುದುಗಳು ಲಭಿಸಿವೆ. 1995-9850 ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯನಿರ್ವ ಹಿಸಿದ್ದಾರೆ. ಪ್ರಸ್ತುತ ಗುರುಕುಲ ಮಾದರಿಯಲ್ಲಿ ಉಚಿತವಾಗಿ ಯುವ ಪೀಳಿಗೆಗೆ ಶಿಲ್ಪಕಲೆ ತರಬೇತಿ ನೀಡುತ್ತಿದ್ದಾರೆ.

"ಕಲಾ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ನನ್ನ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಸಂತಸ ತಂದಿದೆ. ಈ ಗೌರವ ನನ್ನ ಕಲಾ ಕೈಂಕರ್ಯಕ್ಕೆ ಸಿಕ್ಕ ಪ್ರತಿಫಲ"

-

ಜಿ.ಬಿ. ಹಂಸಾನಂದಾಚಾರ್ಯ, ಶಿಲ್ಪಿ

Edited By :
Kshetra Samachara

Kshetra Samachara

31/10/2026 05:23 pm

Cinque Terre

600

Cinque Terre

0

ಸಂಬಂಧಿತ ಸುದ್ದಿ