ಹೊಸಪೇಟೆ : ಮುಸ್ಲಿಂ ಸಮುದಾಯದಲ್ಲಿ ಹುಟ್ಟಿ ಗ್ರಾಮದ ಎಲ್ಲಾ ಹಿಂದೂ ಧರ್ಮದ ಆಚರಣೆಗಳಲ್ಲಿ ಒಬ್ಬರಾಗಿ ಬೆರೆತು ಭಾಗವಹಿಸುತ್ತಿದ್ದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ ಗ್ರಾಮದಲ್ಲಿ ಹುಟ್ಟಿ ಬೆಳೆದ ಅಡ್ಡಿಗೇರಿ ಗೌಸ್ ಸಾಬ್ (68) ಹೃದಯಘಾದಿಂದ ನಿಧನರಾಗಿದ್ದಾರೆ.
ಮೃತರಿಗೆ ಮೂರು ಜನ ಪುತ್ರರು, ಮೂರು ಜನ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇವರು ಹುಟ್ಟಿದ್ದು ಮುಸ್ಲಿಂ ಸಮುದಾಯದವರು ಆದ್ರೂ ಕೂಡಾ ಹಿಂದೂ ಧರ್ಮದ ಪ್ರತಿಯೊಂದು ಆಚರಣೆಗಳಲ್ಲಿ ಖುದ್ದಾಗಿ ತಾವೇ ಭಾಗಿಯಾಗಿ ಗ್ರಾಮದ ಮುಖಂಡರಲ್ಲಿ ಒಬ್ಬರಾಗಿ ನಿಂತು ಕಾರ್ಯನಿರ್ವಹಿಸುತ್ತಿದ್ದರು.
ಗ್ರಾಮದ ಯಾವುದೇ ಜಾತಿ ಸಮುದಾಯದವರು ಮೃತಪಟ್ಟಿದರೂ ಅಲ್ಲಿ ಹಾಜರಾಗಿ ಇಡೀ ರಾತ್ರಿ ಭಜನೆ ಮಾಡುತ್ತಿದ್ದರು.
ಸಾವಿನ ಮನೆಯಲ್ಲಿಯೂ ಮುಂದೆ ನಿಂತು ಮಾನವೀತೆ ಮೆರೆದು ಜಾತಿ ಧರ್ಮದ ಗಡಿ ಮೀರಿ ಕೆಲಸ ಮಾಡುತ್ತಿದ್ದರು.
ಮಸೀದಿಗಳಾಗಲಿ ದೇವಸ್ಥಾನಗಳಾಗಲಿ ಹಬ್ಬ ಹರಿದಿನಗಳಲ್ಲಿ ಸ್ವತಃ ತಾವೆ ನಿಂತು ಭಜನೆಗಳು ಸೇರಿದಂತೆ ಕೆಲಸ ಕಾರ್ಯಗಳಲ್ಲಿ ತೊಡಗುತ್ತಿದ್ದರು. ಅವರು ಒಂದು ಧರ್ಮಕ್ಕೆ ಸೀಮಿತವಾಗದೇ ಎಲ್ಲಾ ಧರ್ಮದವರಿಗೂ ಬೇಕಾಗಿ ನಿಂತು ಬೆಳೆದವರು.
ಮುಸ್ಲಿಂ ಧರ್ಮದಂತೆ ಎಲ್ಲಾ ಧರ್ಮವನ್ನು ಗೌರವದಿಂದ ಕಂಡಂತಹ ವ್ಯಕ್ತಿ ಇವರಾಗಿದ್ದಾರೆ.
ಇಂದು ಅವರ ಸ್ವ ಗ್ರಾಮ ವರದಾಪುರದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಸಮುದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
PublicNext
04/11/2026 07:43 am
LOADING...