ಹೊಸಪೇಟೆ : ಶಿರಸಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶಂಕರಾಚಾರ್ಯ ಪೀಠದ ಗಂಗಾಧರ ಶ್ರೀಗಳಿಂದ ವಿಜಯನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿರೋ ಭಗವದ್ಗೀತಾ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಭಗವದ್ಗೀತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಭಗವದ್ಗೀತೆ ನಮ್ಮ ಭಾರತ ದೇಶದ ಅಸ್ಮೀಯತೆ, ಹಿಂದಿನಿಂದಲೂ ನಮ್ಮ ದೇಶವನ್ನು ಗುರುತಿಸುವುದೇ ನಮ್ಮ ಭಗವದ್ಗೀತೆಯಿಂದ ದುರ್ದೈವ ಅಂದರೆ ನಮ್ಮ ಭಾರತೀಯರೆ ಇನ್ನು ಬಹಳಷ್ಟು ಪ್ರಮಾಣದಲ್ಲಿ ಭಗವದ್ಗೀತೆಯನ್ನ ಓದುವ ಕೆಲಸ ಮಾಡಿಲ್ಲ. ಹೀಗಾಗಿ ಇವತ್ತು ಭಗವದ್ಗೀತೆ ಅಭಿಯಾನದ ಮೂಲಕ ಭಗವದ್ಗೀತೆಯ ಸಾರವನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ ಅಂತಾ ಶ್ರೀಗಳು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೊಟ್ಟೂರು ಸ್ವಾಮಿ ಮಠದ ಬಸವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ರಾಮಕೃಷ್ಣ ಆಶ್ರಮದ ಪ್ರಮೋದಾ ದೇವಿ, ಸಂಚಾಲಕರು ಗೌತಮ್ ಸೇರಿ ಗಣ್ಯರು, ನೂರಾರು ಜನ ಭಗವದ್ಗೀತಾ ಆಸಕ್ತರು ಸೇರಿ ಅನೇಕರು ಭಗವದ್ಗೀತೆ ಅಭಿಯಾನದಲ್ಲಿ ಭಾಗವಹಿಸಿ ಶ್ರೀಗಳ ಸಂದೇಶವನ್ನ ಆಲಿಸಿದರು.
Kshetra Samachara
01/11/2026 03:52 pm
LOADING...