ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಾಜದಲ್ಲಿ ಪೊಲೀಸರು ಶಾಂತಿ ಕಾಪಾಡ್ತಾರೆ, ಪೊಲೀಸರು ಮನೆಯಲ್ಲಿ ಶಾಂತಿ ಕಾಪಾಡಿಕೊಳ್ಳಿ ಎಂದ ಉಸ್ತುವಾರಿ ಸಚಿವ ಬಸವಂತಪ್ಪ

ಹೊಸಪೇಟೆ : ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಲಾದ 36 ಪೊಲೀಸ್ ಸಿಬ್ಬಂದಿಯ ನೂತನ ವಸತಿ ಗೃಹಗಳನ್ನು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಮತ್ತು ಶಾಸಕ ಗವಿಯಪ್ಪ ಉದ್ಘಾಟಿಸಿದರು. ಬಳಿಕ ಸಾಂಕೇತಿಕವಾಗಿ ಚಂದ್ರಶೇಖರ್ ಚಿಗಟೇರಿ ಸೇರಿದಂತೆ ಇತರ ಸಿಬ್ಬಂದಿಗೆ ಕೀಗಳನ್ನು ವಿತರಿಸುವ ಮೂಲಕ ಅಧಿಕೃತವಾಗಿ ಕೊಠಡಿಗಳನ್ನು ಹಸ್ತಾಂತರಿಸಿದರು.

ಗವಿಯಪ್ಪ ಅವರ ಪ್ರಾಮಾಣಿಕ ಕೆಲಸದಿಂದ ಹಾಗೂ ಹಿಂದಿನ ಗೃಹ ಸಚಿವ ಪರಮೇಶ್ವರ್ ಅವರ ವಿಶೇಷ ಮುತುವರ್ಜಿಯಿಂದ 36 ವಸತಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಉಸ್ತುವಾರಿ ಸಚಿವ ಬಸವಂತಪ್ಪ ಹೇಳಿದರು. ಉಳಿದ ವಸತಿ ಕಟ್ಟಡಗಳ ನಿರ್ಮಾಣ ಕಾರ್ಯವೂ ಬಾಕಿ ಇದ್ದು, ಅದನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಹಸ್ತಾಂತರಿಸಲಾಗುವುದು ಎಂದರು. ನೂರಾರು ವರ್ಷಗಳ ಕಾಲ ಬಳಕೆಯಾಗುವಂತೆ ಮತ್ತು ನಿರ್ವಹಣೆ ಮಾಡಲು ಅನುಕೂಲವಾಗುವಂತಹ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ಸೂಚನೆ ನೀಡಿದರು.

36 ಸಿಬ್ಬಂದಿ 36 ಊರುಗಳಿಂದ ಬಂದಿದ್ದಾರೆ. ಎಲ್ಲರೂ ಒಂದೇ ಕುಟುಂಬದವರಂತೆ ಜೀವನ ಸಾಗಿಸಬೇಕು ಎಂದು ಸಚಿವ ಬಸವಂತಪ್ಪ ಕಿವಿಮಾತು ಹೇಳಿದರು. ಪೊಲೀಸರು ಸಮಾಜದಲ್ಲಿ ಶಾಂತಿ ಕಾಪಾಡುವ ಕೆಲಸ ಮಾಡುತ್ತಾರೆ. ಅದೇ ರೀತಿ ನಿಮ್ಮ ಕುಟುಂಬದಲ್ಲಿಯೂ ಶಾಂತಿ ನೆಲೆಸುವಂತೆ ಜೀವನ ಸಾಗಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಪಿ. ಜಾಹ್ನವಿ, 10.97 ಕೋಟಿ ರೂ. ವೆಚ್ಚದಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಸಿಬ್ಬಂದಿಗೆ ವಸತಿ ಗೃಹಗಳ ಅವಶ್ಯಕತೆ ಇತ್ತು. ಡಿಸಿಆರ್ ಕಚೇರಿ ಪಕ್ಕದಲ್ಲಿಯೇ ವಸತಿ ಗೃಹಗಳು ನಿರ್ಮಾಣವಾಗಿರುವುದರಿಂದ ಸಿಬ್ಬಂದಿಯಿಂದ ಕೆಲಸ ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

Edited By :
PublicNext

PublicNext

02/11/2026 01:58 pm

Cinque Terre

6.55 K

Cinque Terre

0

ಸಂಬಂಧಿತ ಸುದ್ದಿ