ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಸಿಎಂ ಡಿಕೆಶಿ ಬ್ಲ್ಯಾಕ್ ಮಾಡೋದಕ್ಕೆ ಸಾಧ್ಯ ಇಲ್ಲ, ಬ್ಲ್ಯಾಕ್ ಮಾಡಿದ್ದಾರಾ..? ಇಲ್ವಾ..? ಅನ್ನೋದನ್ನ ಪೊಲೀಸರು ತನಿಖೆ ಮಾಡ್ತಾರೆ - ಸಚಿವ ಬಸವಂತಪ್ಪ

ಹೊಸಪೇಟೆ: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಕೋಲಾಹಲ ವಿಚಾರಕ್ಕೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಸವಂತಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸ್ಟಿಂಗ್ ಬಗ್ಗೆ ನಮ್ಮೆಲ್ಲ ಹಿರಿಯ ನಾಯಕರು ಮಾತಾಡಿದ್ದಾರೆ. ಏನ್ ಕ್ರಮ ಕೈಗೊಳ್ಳಬೇಕೋ ಕೈಗೊಳ್ತಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಏನ್ ಮಾಹಿತಿ ಬರುತ್ತೋ ಅದರ ಪ್ರಕಾರ ಕ್ರಮ ಆಗುತ್ತೆ ಅಂತ ಹೇಳಿದ್ರು.

ಹೊಸಪೇಟೆಯಲ್ಲಿ ಮಾತನಾಡಿದ ಸಚಿವ ಬಸವಂತಪ್ಪ, ಕುಮಾರಸ್ವಾಮಿ ಬರೀ ಸುದ್ದಿಗೋಷ್ಠಿ ಮಾಡ್ತಿದ್ದಾರೆ. ಅವರ ಬಗ್ಗೆ ನಾನು ಮಾತಾಡಲ್ಲ, ನಮ್ಮ ನಾಯಕರು ಮಾತಾಡ್ತಾರೆ. ಸಿದ್ದರಾಮಯ್ಯ ಅವರನ್ನ ಡಿಕೆಶಿ ಶಿವಕುಮಾರ್ ಬ್ಲ್ಯಾಕ್ ಮೇಲೆ ಮಾಡಿದ್ದಾರೆ ಅನ್ನೋ ಆರೋಪಕ್ಕೂ ಮಾತಾಡಿದ ಅವರು, ಆ ರೀತಿ ಬ್ಲ್ಯಾಕ್ ಮಾಡೋದಕ್ಕೆ ಸಾಧ್ಯ ಇಲ್ಲ. ಬ್ಲ್ಯಾಕ್ ಮಾಡಿದ್ದಾರಾ..? ಇಲ್ವಾ..? ಅನ್ನೋದನ್ನ ಪೊಲೀಸರು ತನಿಖೆ ಮಾಡ್ತಾರೆ. ಸಿದ್ದರಾಮಯ್ಯ ಅವರೂ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಟೀಕೆ ಮಾಡ್ತಿದ್ದಾರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮಾಡ್ತಾರೆ. ಕುಮಾರಸ್ವಾಮಿ ಟೀಕೆ ಮಾಡೋದ್ರ ಬಗ್ಗೆ ಏನೂ ಮಾತಾಡಕಾಗಲ್ಲ. ಟೀಕೆ ಮಾಡೋದಾದ್ರೆ ಆರೋಗ್ಯಕರ ಟೀಕೆ ಮಾಡಲಿ. ಕುಮಾರಸ್ವಾಮಿ ಟೀಕೆ ಮಾಡ್ತಿರೋದಕ್ಕೆ ಜನಾನೇ ಉತ್ತರ ಕೊಡ್ತಾರೆ. ಹಿರಿಯ ನಾಯಕರ ಸ್ಟಿಂಗ್ ಮಾಡೋದು ಎಷ್ಟು ಸರಿ ಅನ್ನೋ ಮಾಧ್ಯಮದವರ ಪ್ರಶ್ನೆಗೂ ಉತ್ತರಿಸಿದ ಅವರು, ಯಾರೇ ಸ್ಟಿಂಗ್ ಮಾಡಿದ್ರೂ ಆ ರೀತಿ ಮಾಡೋದು ಸರಿಯಲ್ಲ ಅಂತ ಹೇಳಿದ್ರು.

Edited By :
PublicNext

PublicNext

04/11/2026 07:33 am

Cinque Terre

5.29 K

Cinque Terre

0

ಸಂಬಂಧಿತ ಸುದ್ದಿ