ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಸಚಿವ ಬಸವಂತಪ್ಪ, ಶಾಸಕ ಗವಿಯಪ್ಪ ಗಮನಕ್ಕಿಲ್ಲದೇ ಸರ್ಕಾರಿ ಭೂಮಿ ಖಾಸಗಿ ಕಂಪನಿಗೆ ಹಸ್ತಾಂತರಿಸಿದ್ರಾ ಸಿಎಂ ಡಿಕೆಶಿ?

ಹೊಸಪೇಟೆ : ವಿಜಯನಗರದಲ್ಲಿ ಸಚಿವರ ಗಮನಕ್ಕೆ ಬಾರದೇ ಸರ್ಕಾರಿ ಭೂಮಿ‌ ಬಿಕರಿ ಆಗಿದೆಯಾ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಹೊಸಪೇಟೆ ತಾಲೂಕಿನ ನಗರಸಭೆ ವ್ಯಾಪ್ತಿಯಲ್ಲಿ RBSSN ಅನ್ನೋ ಗಣಿ ಕಂಪನಿಗೆ ಗುತ್ತಿಗೆ ನೀಡಿದ್ದು ನನಗೆ ಗೊತ್ತೆ ಇಲ್ಲ ಅಂತ ಸಚಿವ ಬಸವಂತಪ್ಪ ಹೇಳಿದ್ರು. ಹಾಗಿದ್ರೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಸವಂತಪ್ಪ, ಶಾಸಕ ಗವಿಯಪ್ಪಗೆ ಗೊತ್ತಿಲ್ಲದೇ ಬೇಕಾಬಿಟ್ಟಿ ಹಣಕ್ಕೆ ಮೂರು ಸಾವಿರ ಕೋಟಿ ಬೆಲೆ ಬಾಳುವ ಭೂಮಿ ಬಿಕರಿ ಆಯ್ತಾ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. RBSSN ಗೆ ಗಣಿ ಗುತ್ತಿಗೆ 64 ಎಕರೆ ಭೂಮಿ ಲೀಸ್ ನೀಡಿ ಪರವಾನಿಗೆ ನೀಡಿರೋದು ನನಗೆ ಗೊತ್ತೆ ಇಲ್ಲ. ಸಿಎಂ ಅವರ ಅಪ್ಪಣೆ ಮೇರೆಗೆ ವಿಚಾರ ಚರ್ಚೆ ನಡೆಸಲಾಗಿದೆ. ನಮ್ಮ ಗಮನಕ್ಕೆ ಬಂದ ತಕ್ಷಣ ನಾವು ಸಿಎಂ ಅವರಿಗೆ ಲೀಸ್ ಕೊಡಬೇಡಿ ಅಂತ ಮನವಿ ಮಾಡಿದ್ದೇವೆ ಅಂತ ಜಾರಿಕೊಳ್ಳುವ ಹೇಳಿಕೆ ನೀಡ್ತಿದ್ದಾರೆ.

ಅಂದು ಭೂಮಿ ಲೀಸ್ ಕೊಡುವ ಸಚಿವ ಸಂಪುಟ ಸಭೆಯಲ್ಲಿ ನಾನು ಇರಲಿಲ್ಲ ಅಂತ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ಬಸವಂತಪ್ಪ ಹೇಳಿದ್ರು. ಆ ಜಮೀನನ್ನ ಮತ್ತೆ ಸಚಿವ ಸಂಪುಟದಲ್ಲಿಟ್ಟು ರದ್ದು ಮಾಡಿಸ್ತೀವಿ ಅಂತ ಸಚಿವ ಬಸವಂತಪ್ಪ ಹೇಳಿದ್ರು. ಇರೋ ಸರ್ಕಾರಿ ಜಾಗ ಉಳಿಸಿಕೊಳ್ಳಲು ಪರದಾಡ್ತಿರೋ ಜಿಲ್ಲಾಡಳಿತದ ನಡೆ ಒಂದು ಕಡೆಯಾದ್ರೆ, ವಿಜಯನಗರ ಕ್ಷೇತ್ರದ ಹಾಲಿ ಶಾಸಕ ಗವಿಯಪ್ಪ, ಮಾಜಿ ಸಚಿವ ಆನಂದ್ ಸಿಂಗ್ ಮಾತಿಗೂ RBSSN ಕಂಪನಿ ಡೋಂಟ್ ಕೇರ್ ಅಂತಿದೆ. ಸಚಿವರ ಗಮನಕ್ಕೂ ತಾರದೇ, ಶಾಸಕರ ಗಮನಕ್ಕೂ ತಾರದೇ, ಯಾಕೆ ಆತುರದ ನಿರ್ಧಾರ ಮಾಡಿದೆ ಅಂತ ಆಕ್ರೋಶದ ಮಾತುಗಳು ಕೇಳಿಬರ್ತಿವೆ. ಇದೇ ವಿಚಾರವಾಗಿ ಮಾತಾಡಿರೋ ಸಚಿವ ಬಸವಂತಪ್ಪ ಸಚಿವ ಸಂಪುಟದಲ್ಲಿ ಮತ್ತೆ ಚರ್ಚಿಸಿ ರದ್ದು ಮಾಡುವ ಪ್ರಯತ್ನ ಮಾಡುತ್ತೇವೆ ಅಂತ ಭರವಸೆ ನೀಡದ್ರು. ಶಾಸಕರು, ಸಚಿವರು ನೀಡಿರೋ ಭರವಸೆ ಹಾಗೆಯೇ ಉಳಿಯುತ್ತಾ...? 64 ಎಕರೆ ಭೂಮಿ ಸರ್ಕಾರ ವಾಪಸ್ ಪಡೆಯುತ್ತಾ ಕಾದು ನೋಡಬೇಕು.

Edited By :
PublicNext

PublicNext

02/11/2026 04:18 pm

Cinque Terre

5.6 K

Cinque Terre

0

ಸಂಬಂಧಿತ ಸುದ್ದಿ