ಹೊಸಪೇಟೆ : ವಕೀಲರ ಮೇಲಿನ ಹಲ್ಲೆ, ಕೊಲೆ ಖಂಡಿಸಿ ವಕೀಲರು ಬೀದಿಗಿಳದಿದ್ರು. ಕಲಾಪ ಬಹಿಷ್ಕಾರ ಮಾಡಿ ನ್ಯಾಯವಾದಿಗಳು ಹೋರಾಟಕ್ಕೆ ಇಳಿದಿದ್ರು. ಹೊಸಪೇಟೆಯಲ್ಲಿ ವಕೀಲರಿಂದ ಬೃಹತ್ ಬೈಕ್ ರ‍್ಯಾಲಿ ಆಯೋಜನೆ ಮಾಡಲಾಗಿತ್ತು.
ಹೊಸಪೇಟೆಯ ನ್ಯಾಯಾಲಯದ ಆವರಣದಿಂದ ಬೈಕ್ ರ‍್ಯಾಲಿ ಮೂಲಕ ತೆರಳಿ, ಪ್ರಮುಖ ವೃತ್ತಗಳಲ್ಲಿ ಸಂಚರಿಸಿದ್ರು. ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು. ಇನ್ನೂ ಬೆಂಗಳೂರಿನಲ್ಲಿ ವಕೀಲರ ಕೊಲೆ, ಗೌರಿಬಿದನೂರಿನಲ್ಲಿ ಹಲ್ಲೆ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತಾಡಿದ ವಕೀಲರು, ವಕೀಲರಿಗೆ ಸೂಕ್ತ ಭದ್ರತೆ ನೀಡಬೇಕು. ವಕೀಲರ ರಕ್ಷಣಾ ಕಾಯ್ದೆ ಸಮರ್ಪಕ ಜಾರಿ ಮಾಡಬೇಕು. ವಕೀಲರ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕೊಲೆಯಾದ ವಕೀಲರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಅಂತ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ವಕೀಲರ ರಕ್ಷಣೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ರು.
PublicNext
03/11/2026 06:33 pm
LOADING...