ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ‌ಸುಳ್ಳು ಸುದ್ದಿ ಹಬ್ಬಿಸಿ ಅರಾಜಗರುಕತೆ ಸೃಷ್ಟಿಸಲು ಯತ್ನಿಸುತ್ತಿದೆ: ಬ್ರಿಜೇಶ್ ಚೌಟ

ಮಡಿಕೇರಿ : ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ನಂಬಿಕೆಯಿಲ್ಲದ ಕಾಂಗ್ರೆಸ್ ಪಕ್ಷ, ಚುನಾವಣಾ ಪ್ರಕ್ರಿಯೆಯನ್ನು ಅಪನಂಬಿಕೆಯಿಂದ ನೋಡುತ್ತಿದೆ. ಈ ಕುರಿತು ಸುಳ್ಳುಗಳನ್ನೇ ಹೇಳುವ ಮೂಲಕ ರಾಷ್ಟçದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಂವಿಧಾನ"ವನ್ನು ಕೈಯಲ್ಲಿ ಹಿಡಿದು ಓಡಾಡುವ ಕಾಂಗ್ರೆಸ್ಸಿಗರಿಗೆ ಸಂವಿಧಾನದ ಬಗ್ಗೆ, ಸಂಸತ್ತಿನ ಬಗ್ಗೆ, ಚುನಾವಣಾ ಪ್ರಕ್ರಿಯೆಗಳ ಬಗ್ಗೆಯೇ ನಂಬಿಕೆಯಿಲ್ಲವೆAದು ಲೇವಡಿ ಮಾಡಿದರು.

ನಿರಂತರವಾಗಿ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಆಕ್ಷೇಪಗಳನ್ನು ಎತ್ತುತ್ತಾ, "ವೋಟ್ ಚೋರಿ"ಯ ಬಗ್ಗೆ ಪ್ರತಿನಿತ್ಯ ಹುಯಿಲೆಬ್ಬಿಸುತ್ತಿರುವ ಕಾಂಗ್ರೆಸ್, ಮತದಾರರ ಪಟ್ಟಿಯಿಂದ ನಿಜಕ್ಕೂ ಬಿಟ್ಟು ಹೋಗಿರುವ ಮತದಾರರನ್ನು ಕರೆತಂದು ಮುಂದೆ ನಿಲ್ಲಿಸಲಿ ಎಂದು ಸವಾಲೆಸೆದರು. ಕರ್ನಾಟಕದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿಕೊಂಡು ಬರುತ್ತಿದೆ. ನಿಜಕ್ಕಾದರೆ, ಎಸ್‌ಐಆರ್ ಪ್ರಕ್ರಿಯೆ ಎಂದರೆ ಮತಪಟ್ಟಿಯಲ್ಲಿ ಉಳಿದುಹೋಗಿದ್ದ ಮೃತಪಟ್ಟವರ ಹೆಸರುಗಳನ್ನು, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊAಡವರನ್ನು ಹಾಗೂ ಎರಡೆರಡು ಕಡೆಯ ಮತಪಟ್ಟಿಯಲ್ಲಿ ಇರುವ ಹೆಸರುಗಳನ್ನು ತೆಗೆಯುವ ಮೂಲಕ ಮತಪಟ್ಟಿಯನ್ನು ಸಮರ್ಪಕಗೊಳಿಸುವುದೇ ಆಗಿದೆ. ಈ ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಂಬಿಕೆ ಇಟ್ಟಂತಹ ರಾಷ್ಟಿçÃಯ ಪಕ್ಷಗಳ ಪಾಲ್ಗೊಳ್ಳುವಿಕೆಗೂ ಚುನಾವಣಾ ಆಯೋಗ ಅವಕಾಶವನ್ನು ಒದಗಿಸಿದೆ. ಹೀಗಿದ್ದೂ ಕಾಂಗ್ರೆಸ್ ಎಸ್‌ಐಆರ್ ಬಗ್ಗೆ ದುರುದ್ದೇಶಪೂರಿತವಾದ ಆರೋಪಗಳನ್ನು ಮಾಡುವ ಮೂಲಕ, ಸುಳ್ಳನ್ನೇ ಸತ್ಯವನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ತೀಕ್ಷ÷್ಣವಾಗಿ ನುಡಿದರು.

ಎಸ್‌ಐಆರ್ ಪ್ರಕ್ರಿಯೆಯಿಂದ ರಾಷ್ಟçವ್ಯಾಪಿ 13 ಕೋಟಿ ಹಾಗೂ ರಾಜ್ಯದಲ್ಲಿ 1 ಕೋಟಿ ಮತದಾರರನ್ನು ಕೈಬಿಡಲಾಗಿದೆ ಎನ್ನುವ ಆರೋಪ ಕಾಂಗ್ರೆಸ್‌ನದು. ಆದರೆ, ಕೈಬಿಟ್ಟ ಈ ಹೆಸರುಗಳು ಎಸ್‌ಐಆರ್ ಪ್ರಕ್ರಿಯೆಯ ಆರಂಭಿಕ ಹಂತದಲ್ಲೇ ಮತಪಟ್ಟಿಯಲ್ಲಿ ಗುರುತಿಸಲಾದ ಮೃತಪಟ್ಟವರ, ಶಾಶ್ವತವಾಗಿ ಹೊರತೆರಳಿದವರ ಮತ್ತು ಎರಡು ಕಡೆ ಹೆಸರು ಉಳ್ಳಂತಹ ಮತದಾರರಷ್ಟೇ ಆಗಿದ್ದಾರೆ. ಅಷ್ಟಕ್ಕೂ ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷರಿಂದ ತಳಹಂತದ ಬಿಎಲ್‌ಒಗಳವರೆಗಿನ ಎಲ್ಲರೂ ಈ ರಾಜ್ಯ ಸರ್ಕಾರದ ಸಿಬ್ಬಂದಿಗಳೇ ಆಗಿದ್ದಾರೆಂದು ಮಾರ್ಮಿಕವಾಗಿ ನುಡಿದರು.

ಎಸ್‌ಐಆರ್ ಕುರಿತ ಸುಳ್ಳುಗಳನ್ನು ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್, ಎಲ್ಲರಲ್ಲೂ ಎಸ್‌ಐಆರ್ ಬಗ್ಗೆ ಅವಿಶ್ವಾಸದ ಭೂತ ಬಿಡುವ ಪ್ರಯತ್ನಕ್ಕೆ ಇಳಿದಿರುವುದಾಗಿ ಕಟುವಾಗಿ ನುಡಿದು, ಹೀಗಿದ್ದೂ ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, ಕಳೆದ ಐವತ್ತು ವರ್ಷಗಳಿಂದ ಮತದಾರರ ಪಟ್ಟಿಯಲ್ಲಿ ಇದ್ದ ಮೃತಪಟ್ಟ ಮತದಾರರ ಹೆಸರನ್ನು ತೆಗೆದು ಪಟ್ಟಿಯನ್ನು ಶುದ್ಧೀಕರಿಸುವ ಕಾರ್ಯ ಎಸ್‌ಐಆರ್‌ನಿಂದ ನಡೆದಿದೆ ಎಂದು ಹೇಳಿದ್ದಾರೆ. ಇವರ ಹೇಳಿಕೆ ಗಮನಿಸಿದಾಗ, ಇವರಿಗೆ ಸುಳ್ಳು ಹೇಳುವ ಬ್ರಿಫಿಂಗ್ ಕಾಂಗ್ರೆಸ್‌ಂದ ಆಗಿಲ್ಲವೆಂದು ಕಾಣುತ್ತದೆಂದು ಹಾಸ್ಯದ ಧಾಟಿಯಲ್ಲಿ ನುಡಿದರು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ವೋಟ್ ಚೋರಿ ಆರೋಪಗಳಿಗೆ ಜನರೇ ಉತ್ತರಗಳನ್ನು ನೀಡಲಾರಂಭಿಸಿದ್ದಾರೆ. ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲೇ ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ಈ ಹಿಂದಿನಿAದಲೂ ಕಾಂಗ್ರೆಸ್ ಇವಿಎಂ ಬಗ್ಗೆ ತನ್ನ ಆಕ್ಷೇಪ ವ್ಯಕ್ತಪಡಿಸಿದೆಯಾದರೂ, ಅದಕ್ಕೆ ಪುರಾವೆಗಳನ್ನು ನೀಡಿಲ್ಲ. ಸುಪ್ರೀಂ ಕೋರ್ಟ್ ಎಸ್‌ಐಆರ್ ಕುರಿತ ಆಕ್ಷೇಪಗಳಿಗೆ ಸಂಬAಧಿಸಿದAತೆ ಕಾಂಗ್ರೆಸ್‌ಗೆ ಅಫಿಡವಿಟ್ ಸಲ್ಲಿಸುವಂತೆ ತಿಳಿಸಿದ್ದರೂ, ಅದನ್ನು ಮಾಡಲು ಸಾಧ್ಯವಾಗಿಲ್ಲ. ಹೀಗಿದ್ದೂ ಕಾಂಗ್ರೆಸ್ ಈ ಎಲ್ಲ ವಿಚಾರಗಳನ್ನು ಮತ್ತೆ ಮುಂದಿಟ್ಟುಕೊAಡು ಅರಾಜಕತೆ ಸೃಷ್ಟಿಗೆ ಮುಂದಾಗಿದ್ದು, ರಾಹುಲ್ ಗಾಂಧಿ ವಿರುದ್ಧ ಜನತೆ ತಿರುಗಿ ಬೀಳುವ ದಿನಗಳು ದೂರವಿಲ್ಲವೆಂದು ಸ್ಪಷ್ಟಪಡಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣಕ್ಕೆ ಮುಂದಾಗಿದೆ. ಬಿಜೆಪಿಯವರು ಮತಪಟ್ಟಿಯಿಂದ ಮುಸ್ಲಿಂ ಮತದಾರರನ್ನು ತೆಗೆದುಹಾಕಿರುವುದಾಗಿ ಹೇಳುತ್ತಾ ಬರುತ್ತಿದೆ. ಸಾಧ್ಯವಾದರೆ ಕಾಂಗ್ರೆಸ್ ಪಕ್ಷವು ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟು ಮುಸ್ಲಿಂ ಮತ್ತು ಹಿಂದೂ ಮತದಾರರ ಹೆಸರು ಮತಪಟ್ಟಿಯಿಂದ ಹೊರಹೋಗಿದೆ ಎನ್ನುವುದನ್ನು ತಿಳಿಸಲಿ. ಫಾರಂ ನಂ. 7ರ ಮೂಲಕ ಮತದಾರರನ್ನು ತೆಗೆಯಲಾಗುತ್ತಿದೆ ಎನ್ನುವ ಆರೋಪ ಮಾಡಲಾಗಿದೆ. ಆದರೆ, ಈ ರೀತಿ ಫಾರಂ ನಂ. 7 ಸಲ್ಲಿಕೆಯಾದ ಮತದಾರರು ಅಗತ್ಯ ದಾಖಲೆಗಳ ಮೂಲಕ ಮತಪಟ್ಟಿಗೆ ಸೇರ್ಪಡೆಗೊಳ್ಳಲು ಸಹ ಅವಕಾಶವಿದೆಯೆಂದು ಹೇಳಿದರು.

ರಾಷ್ಟçದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ತಾಳುವ ಮೂಲಕ ಅರಾಜಕತೆ ಮೂಡಿಸುವ ಪ್ರಯತ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ "ಲೋಕತಂತ್ರ ಬಚಾವೋ–ಕುತಂತ್ರ ಹಟಾವೋ" ಅಭಿಯಾನವನ್ನು ಪಕ್ಷ ಆಯೋಜಿಸಿರುವುದಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, "ಲೋಕತಂತ್ರ ಬಚಾವೋ, ಕುತಂತ್ರ ಹಟಾವೋ" ಅಭಿಯಾನದಡಿ ಜಿಲ್ಲೆಯಲ್ಲಿ ಅಭಿಯಾನ ನಡೆಯಲಿದ್ದು, ನವೆಂಬರ್ ತಿಂಗಳಲ್ಲಿ ಜನಜಾಗೃತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆಂದು ತಿಳಿಸಿದರು.

Edited By : PublicNext Desk
PublicNext

PublicNext

30/10/2026 07:00 am

Cinque Terre

5.22 K

Cinque Terre

0

ಸಂಬಂಧಿತ ಸುದ್ದಿ