ಮಡಿಕೇರಿ : ಕೊಡಗು ಪ್ರವಾಸೋದ್ಯಮ ಅಭಿವೖದ್ದಿ ಸಂಬಂಧಿತ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳೊಂದಿಗೆ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗುತ್ತದೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ, ಕೊಡಗಿನ ಪ್ರವಾಸಿ ತಾಣಗಳಿಗೆ ತೆರಳುವ 5 ಕಿ.ಮೀ.ಯೊಳಗಿನ ಗ್ರಾಮೀಣ ರಸ್ತೆಗಳನ್ನು ಶೀಘ್ರಗತಿಯಲ್ಲಿ ಅಭಿವೖದ್ದಿ ಪಡಿಸಲಾಗುತ್ತದೆ ಎಂದರು.
ನಗರದ ಹೊರವಲಯದಲ್ಲಿನ ಕೂಗ್೯ ವೈಲ್ಡರ್ ನೆಸ್ ರೆಸಾಟ್೯ನಲ್ಲಿ ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ನ ವಾಷಿ೯ಕ ಮಹಾಸಭೆ ಹಿನ್ನಲೆಯಲ್ಲಿ ಆಯೋಜಿತ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಡಮೆ ಸೌಕಯ೯ಗಳ ನಡುವೇ ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಗಮನ ಸೆಳೆದಿದೆ. ಪ್ರವಾಸೋದ್ಯಮಕ್ಕೆ ಬಹಳ ಮುಖ್ಯವಾಗಿರುವ ರಸ್ತೆಗಳ ಅಭಿವೖದ್ದಿಗೆ ತಾನು ಎಲ್ಲಾ ರೀತಿಯಲ್ಲಿಯೂ ಸಹಾಯ ನೀಡುವುದಾಗಿಯೂ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು. ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸಚಿವರ ಸಭೆ ನಡೆಸಿ ಕೊಡಗು ಪ್ರವಾಸೋದ್ಯಮದ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದ ಸಚಿವರು, ಕೊಡಗಿನ ಗ್ರಾಮೀಣ ಭಾಗದಲ್ಲಿರುವ 5 ಕಿ.ಮೀ.ಯೊಳಗಿನ ಪ್ರವಾಸಿ ತಾಣಗಳಿಗೆ ಸಂಪಕ೯ ಕಲ್ಪಿಸುವ ರಸ್ತೆಗಳ ಅಭಿವೖದ್ದಿಗೆ ತುತು೯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕೊಡಗಿನಲ್ಲಿ ಪ್ರವಾಸೋದ್ಯಮ ತರಬೇತಿ ಕೇಂದ್ರ ಸ್ಥಾಪನೆ, ಅಂತರರಾಜ್ಯ ಸಂಪಕ೯ ರಸ್ತೆಗಳ ಅಭಿವೖದ್ದಿ, ಮಿನಿ ವಿಮಾನನಿಲ್ದಾಣ ಸೇರಿದಂತೆ ಹಲವಾರು ಬೇಡಿಕೆಗಳ ಬಗ್ಗೆ ತಾನು ಗಂಭೀರವಾಗಿ ಗಮನ ನೀಡುವುದಾಗಿಯೂ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 20 ವಷ೯ಗಳ ಳಳಿಕ ರಾಜ್ಯ ಸಕಾ೯ರದಿಂದ ಮೂರೂವರೆ ವಷ೯ಗಳಲ್ಲಿ 4 ಸಾವಿರ ಸೇತುವೆಗಳನ್ನು ರಾಜ್ಯವ್ಯಾಪಿ ನಿಮಿ೯ಸಲಾಗಿದೆ ಎಂದು ಹೇಳಿದ ಸಚಿವರು, ಕಳೆದ ಹಲವಾರು ವಷ೯ಗಳಿಂದ ರಾಜ್ಯ ಸಕಾ೯ರಗಳು ಮುಂಗಡ ಪತ್ರದಲ್ಲಿ ಲೋಕೋಪಯೋಗಿ ಇಲಾಖೆಗೆ ನೀಡುತ್ತಿರುವ 10 ಸಾವಿರ ಕೋಟಿ ರು. ವಾಷಿ೯ಕ ಅನುದಾನವನ್ನು ಹೆಚ್ಚು ಮಾಡಲೇ ಇಲ್ಲ ಎಂದು ವಿಷಾಧಿಸಿದರು.
PublicNext
01/11/2026 07:00 am