ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆಯಿಂದ ಕೃಷಿ ಕ್ಷೇತ್ರದಲ್ಲಿ ಹಿನ್ನೆಡೆ, ಮಾನವ ಮತ್ತು ವನ್ಯ ಪ್ರಾಣಿ ಸಂಘರ್ಷ ತಡೆಯುವುದು, ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕಲ್ಪಿಸುವುದು, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯ ಒದಗಿಸುವುದು...
ಹೀಗೆ ಹಲವು ವಿಚಾರಗಳ ಕುರಿತು ಆಡಳಿತ ಮತ್ತು ವಿರೋಧಪಕ್ಷಗಳು ಸಮರ್ಥನಿಯ ಪ್ರತಿಪಾದನೆ, ಏಟು- ಏದುರೇಟು, ಯಾರು ಯಾರಿಗೂ ಕಡಿಮೆ ಇಲ್ಲದಂತೆ ಪ್ರತಿಪಾದನೆ ಮಾಡುತ್ತಿದ್ದ ದೃಶ್ಯ ಜಿ.ಪಂ.ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ‘ಯುವ ಸಂಸತ್’ ಕಾರ್ಯಕ್ರಮದಲ್ಲಿ ಕಂಡು ಬಂದಿತು.
ಪ್ರೌಢಶಾಲೆ, ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಯ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಡಳಿತ ಮತ್ತು ಪ್ರತಿಪಕ್ಷದಲ್ಲಿ ಪಾಲ್ಗೊಂಡು ಕೊಡಗು ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದ್ದು, ಮನೋಜ್ಞವಾಗಿತ್ತು.
ಸಭೆಯ ಆರಂಭದಲ್ಲಿ ಸಭಾಧ್ಯಕ್ಷರನ್ನು ಮುಖ್ಯಮಂತ್ರಿಯವರು ಮತ್ತು ಪ್ರತಿಪಕ್ಷದ ನಾಯಕರು ಸಭಾಧ್ಯಕ್ಷ ಸ್ಥಾನದ ಪೀಠಕ್ಕೆ ಕರೆದುಕೊಂಡು ಬರುವುದರಿಂದ ಆರಂಭವಾಯಿತು. ಸಭಾಧ್ಯಕ್ಷರು ತಮ್ಮ ಆಸನದಲ್ಲಿ ಕುಳಿತು ಯುವ ಸಂಸತ್ ನಡೆಸಲು ಅನುವು ಮಾಡಿದರು.
ನಾಡಗೀತೆ, ವಂದೇಮಾತಂ ಗೀತೆ ಹಾಡುವ ಮೂಲಕ ಯುವ ಸಂಸತ್ ಆರಂಭವಾಯಿತು. ನಂತರ ಭಾರತ ಸಂವಿಧಾನ ಪ್ರಸ್ತಾವನೆಯನ್ನು ಓದಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಸಭಾಧ್ಯಕ್ಷರ ಪಾತ್ರ ನಿರ್ವಹಿಸಿದ ಮುತ್ತಪ್ಪ ಪ್ರಜಾಪ್ರಭುತ್ವದ ಶಕ್ತಿ ಜನರ ಧ್ವನಿಯಾಗಿದ್ದು, ಜನರ ಸಮಸ್ಯೆಯನ್ನು ಪರಿಹರಿಸುವುದು ಎಲ್ಲರ ಆಶಾಯವಾಗಿದೆ. ಅದರಂತೆ ಸಮಾಜಮುಖಿಯಾಗಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಕೋರಿದರು.
ಯುವ ಸಂಸತ್‍ನಲ್ಲಿ ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದ ಪ್ರಭಾಕರ್ ಅವರು ಸಚಿವರನ್ನು ಪರಿಚಯಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂತಾಪ ಸೂಚನೆ ನಡೆಯಿತು. ಹಾಗೆಯೇ ಇತ್ತೀಚಿಗೆ ನಿಧನರಾದ ಗಣ್ಯರ ಕುರಿತು ಸ್ಮರಣೆ ನಡೆಯಿತು.
ಯುವ ಸಂಸತ್‍ನ ವಿದ್ಯಾರ್ಥಿಗಳು ಮಾತನಾಡಿದರು. ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು, ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಬೇಕು, ಜಿಲ್ಲೆಯ ಹಲವು ರಸ್ತೆಗಳಲ್ಲಿ ಸಂಕೇತ(ಸಿಗ್ನಲ್) ಹಾಗೂ ವಾಹನ ನಿಲುಗಡೆಗೆ ಇಲ್ಲದೆ ತೊಂದರೆಯಾಗಿದೆ. ಇದರಿಂದ ಅಪಘಾತ ಸಹ ಹೆಚ್ಚಾಗುತ್ತಿದೆ. ಇದನ್ನು ತಡೆಯಬೇಕೆಂದು ವಿರೋಧ ಪಕ್ಷದವರು ಬೆಳಕು ಚೆಲ್ಲಿದರು.
PublicNext
01/11/2026 06:55 am