ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಪರಿಷತ್ ಚುನಾವಣೆ ಫಲಿತಾಂಶ ಬಗ್ಗೆ ನಿಖಿಲ್ ಹೇಳಿದ್ದೇನು?

ರಾಮನಗರ: ರಾಮನಗರದಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಪರಿಷತ್ ಚುನಾವಣೆ ಖುಷಿ ಹಂಚಿ ಕೊಂಡಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆದ್ದಿದ್ದಾರೆ. ನಮ್ಮ ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆದ್ದಿದ್ದಾರೆ

ಇದು ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮ.

ಎ.ಪಿ.ರಂಗನಾಥ್ ರವರಿಗೆ ಶಿಕ್ಷಕರು ಒಂದು ಅವಕಾಶ ಕೊಟ್ಟಿದ್ದಾರೆ. ಕಾಂಗ್ರೆಸ್ ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್ ಚುನಾವಣೆ ಬೇಕು ಅಂತಿದ್ರು.

ಈಗ ಬ್ಯಾಲೆಟ್ ಪೇಪರ್ ನಲ್ಲೇ ಕಾಂಗ್ರೆಸ್ ಸೋತಿದೆ.

ಇದು ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿ ಅಂತ ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಮುಂದೆ ಕರ್ನಾಟಕ ಸೇರಿ ಮೂರು ರಾಜ್ಯಗಳ ಚುನಾವಣೆ ಹತ್ತಿರದಲ್ಲಿದೆ.

ಕಾಂಗ್ರೆಸ್ ಗೆ ಪತನದ ದಿನಗಳು ಹತ್ತಿರ ಬರ್ತಿದೆ. ಕಾಂಗ್ರೆಸ್ 136 ಸ್ಥಾನ ಪಡೆದಿದೆ. ಆದ್ರೆ, ಅಭಿವೃದ್ಧಿ ಕಡೆ ಗಮನ ಕೊಡ್ತಿಲ್ಲ. ಅಭಿವೃದ್ಧಿ ಕಡೆ ಫೋಕಸ್ ಮಾಡಿದ್ರೆ ಕಾಂಗ್ರೆಸ್ ಗೆ ಇಂತಹ ಸ್ಥಿತಿ ಬರ್ತಿರಲಿಲ್ಲ. ಬದಲಾವಣೆ ಜಗದ ನಿಯಮ, ಜನ ಬದಲಾವಣೆ ಬಯಸಿದ್ದಾರೆ ಎಂದಿದ್ದಾರೆ.

Edited By :
PublicNext

PublicNext

30/10/2026 08:45 am

Cinque Terre

5.76 K

Cinque Terre

0