ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಬೈಕ್‌ ಸೌಂಡ್ ಮಾಡಿದ್ದಕ್ಕೆ ಯುವಕನ ಮರ್ಡರ್, ಸ್ಥಳಕ್ಕೆ SP ಭೇಟಿ

ಚಿತ್ರದುರ್ಗ: ಇದು ಚಿತ್ರದುರ್ಗ ಜಿಲ್ಲೆಯ ಬಹದ್ದೂರ್ ಘಟ್ಟ ಗ್ರಾಮ. ಈ ಊರಿನಲ್ಲಿ ಬೈಕ್ ನಲ್ಲಿ ಆನಂದ್ ಅನ್ನೋ 32 ವರ್ಷದ ಯುವಕ ಅದೇ ಗ್ರಾಮದ ವಾಸು ಅನ್ನೋರ ಮನೆ ಮುಂಭಾಗ ರೌಂಡ್ಸ್ ಮಾಡ್ತಿದ್ದ. ಬೈಕ್ ಸೌಂಡ್ ರೈಜ್ ಮಾಡಿಕೊಂಡು, ವಾಸು ಕುಟುಂಬವನ್ನ ಕೆಣಕಿದ್ದ. ಇದೇ ಕಾರಣಕ್ಕೆ ವಾಸು ಹಾಗೂ ಆನಂದ್ ನಡುವೆ ಜಗಳ ಶುರುವಾಗಿತ್ತು. ಕರ್ಕಶ ಶಬ್ಧ ಮಾಡಿಕೊಂಡು ಓಡಾಡ್ತಿದ್ದಾನೆ ಅಂತ ಸ್ಥಳಕ್ಕೆ ವಾಸು ಸಂಬಂಧಿಕರಾದ ವಿಕ್ಕಿ, ವಿಜಯ್, ಲಕ್ಷ್ಮಣ್ ಸೇರಿ ಹಲವರು ಎಂಟ್ರಿಯಾಗಿದ್ರು. ನೋಡ ನೋಡುತ್ತಿದ್ದಂತೆ ಯುವಕ ಆನಂದ್ ಎದೆಗೆ ಹಾರೇ ಹಾಕಿದ್ದ ಪುಡಾರಿಗಳು, ಮಚ್ಚಿನಿಂದ ಕೊಚ್ಚಿ ಕೊಲೆ ಗೈದಿದ್ದಾರೆ. ಇನ್ನೂ ಯುವಕ ಆನಂದ್ ಪ್ರಾಣ ಪಕ್ಷಿ ಹಾರುತ್ತಿದ್ದಂತೆ, ಸ್ಥಳದಿಂದ ಆರೋಪಿಗಳು ಕಾಲ್ಕಿತ್ತಿದ್ದಾರೆ. ಭೀಕರ ಕೊಲೆ ಕಣ್ಣಾರೇ ಕಂಡಿದ್ದ ಮೃತ ಆನಂದ್ ಸಂಬಂಧಿಕರು ಕೂಡಾ ಮನೆಯಲ್ಲಿ ಅವಿತು ಕುಳಿತಿದ್ದು, ಪುತ್ರನ ಕೊಲೆ ಕಂಡು ಆನಂದ್ ಪೋಷಕರು ಕೂಡಾ ಗಾಬರಿಯಾಗಿದ್ದಾರೆ. ಇನ್ನೂ ಈ ಕೊಲೆಗೆ ಕೇವಲ ಬೈಕ್ ಸೌಂಡ್ ಮಾತ್ರವಲ್ಲದೇ, ಹಳೆಯ ದ್ವೇಷ ಕೂಡಾ ಕಾರಣ ಎನ್ನಲಾಗ್ತಿದೆ. ಮೃತ ಆನಂದ್ ಆರೋಪಿ ವಾಸು ನಡುವೆ ವ್ಯವಹಾರಿಕ ಸಂಬಂಧವಿತ್ತು. ಆದ್ರೆ ಕಳೆದ ಮೂರ್ನಾಕು ವರ್ಷಗಳ ಹಿಂದೆ ಇದೇ ವಿಚಾರಕ್ಕೆ ಗಲಾಟೆ ಕೂಡಾ ನಡೆದಿತ್ತು. ಇದೇ ದ್ವೇಷ ವೈಷಮ್ಯ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳಕ್ಕೆ ಚಿತ್ರದುರ್ಗ SP ಕುಶಾಲ್ ಚೌಕ್ಸೆ, ASP ಶಿವಕುಮಾರ್ ಹಾಗೂ ಭರಮಸಾಗರ ಪೊಲೀಸರು ಕೂಡಾ ಭೇಟಿ ಕೊಟ್ಟಿದ್ದು, ಆರೋಪಿಗಳಾದ A1 ಆರೋಪಿ ವಾಸುವನ್ನ ಹೆಡೆಮುರಿ ಕಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸುಕೋ ಟೀಂ ಕೂಡಾ ಭೇಟಿ ನೀಡಿ, ಕೊಲೆಯ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇನ್ನೂ ಈ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇಂಥ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲಿ, ಮೃತನ ಆತ್ಮಕ್ಕೆ ಶಾಂತಿ ಸಿಗಲಿ ಅನ್ನೋದು ಮೃತನ ಸಂಬಂಧಿಕರ ಒತ್ತಾಯ.

Edited By :
PublicNext

PublicNext

30/10/2026 10:00 pm

Cinque Terre

11.87 K

Cinque Terre

0