ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ :

ಮೇಷ: ಹಿರಿಯ ಅಧಿಕಾರಿಗಳೊಂದಿಗೆ ವಾದ ಬೇಡ. ಕುಟುಂಬದ ಆಸ್ತಿ ವಿವಾದ ಬಗೆಹರಿಯಲಿದೆ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ.

ವೃಷಭ: ಮಕ್ಕಳ ಬಗ್ಗೆ ಇದ್ದ ಆತಂಕ ನಿವಾರಣೆಯಾಗಿ ನೆಮ್ಮದಿ. ನಿವೇಶನ ಖರೀದಿಯಲ್ಲಿ ಎಚ್ಚರಿಕೆ ಇರಲಿ. ಕೊಟ್ಟ ಸಾಲ ತಿರುಗಿ ಬರಲಿದೆ.

ಮಿಥುನ: ಪಾಲುದಾರಿಕೆಯ ವ್ಯವಹಾರದಲ್ಲಿ ಪ್ರಗತಿ. ಅನಗತ್ಯ ಖರ್ಚುಗಳಿಗೆ ನಿಯಂತ್ರಣ ಹಾಕಿ. ನಿಮ್ಮ ಪ್ರಾಮಾಣಿಕತೆಗೆ ಮೆಚ್ಚುಗೆ ಸಿಗಲಿದೆ.

ಕಟಕ: ವ್ಯಾವಹಾರಿಕವಾಗಿ ಶತ್ರುಗಳ ಮೇಲೆ ವಿಜಯ. ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ. ಆಸ್ತಿ ವಿಚಾರಗಳಲ್ಲಿ ಗೆಲುವು ಸಿಗಲಿದೆ.

ಸಿಂಹ: ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ಕೇಳಲಿದ್ದೀರಿ. ಕಲಾವಿದರ ಪ್ರತಿಭೆಗೆ ಸೂಕ್ತ ಪುರಸ್ಕಾರ. ರಚನಾತ್ಮಕ ಕೆಲಸಗಳಿಂದ ಗೌರವ.

ಕನ್ಯಾ: ಮನೆ ಖರೀದಿ ಮಾಡಲು ಶುಭದಿನ. ಸಹೋದರನಿಂದ ಆರ್ಥಿಕ ನೆರವು. ಮಹಿಳಾ ಉದ್ಯೋಗಿಗಳು ಒತ್ತಡವನ್ನು ನಿರ್ವಹಿಸುವಿರಿ.

ತುಲಾ: ಉನ್ನತ ವಿದ್ಯಾಭ್ಯಾಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೊಸ ಪಾಲುದಾರರ ಆಗಮನ. ಆಸ್ತಿ ವಿಚಾರದಲ್ಲಿ ಎಚ್ಚರ.

ವೃಶ್ಚಿಕ: ಕೊಟ್ಟ ಹಣ ತಿರುಗಿ ಬರಲಿದೆ. ಗುರು ಹಿರಿಯರೊಂದಿಗೆ ವಿಧೇಯತೆಯಿಂದ ವರ್ತಿಸಿ. ಕಚೇರಿ ಬದಲಾವಣೆಗೆ ನಿರ್ಧಾರ.

ಧನಸ್ಸು: ಕಿರುಚಿತ್ರ ನಿರ್ವಪಕರಿಗೆ ಧನ ಲಾಭ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸುದಿನ. ಸರ್ಕಾರಿ ಒಪ್ಪಂದ ಅಂತಿಮವಾಗಲಿದೆ.

ಮಕರ: ಅಲಂಕಾರಿಕ ವಸ್ತು ಖರೀದಿಯಲ್ಲಿ ಹಣ ವೆಚ್ಚವಾಗಲಿದೆ. ಆಧ್ಯಾತ್ಮಿಕ ವಿಷಯಗಳತ್ತ ಮನಸ್ಸು. ಆನ್​ಲೈನ್ ವ್ಯಾಪಾರದಿಂದ ಲಾಭ.

ಕುಂಭ: ಉದ್ಯಮದಲ್ಲಿರುವ ಮಹಿಳೆಯರಿಗೆ ವಿದೇಶ ಪ್ರವಾಸ ಸಾಧ್ಯತೆ. ಉದ್ಯೋಗ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ.

ಮೀನ: ಕೆಲಸದ ಹೊರೆ ಹೆಚ್ಚಾಗಲಿದೆ. ಜೇನು, ರೇಷ್ಮೆ ವ್ಯವಸಾಯದಲ್ಲಿ ನಿರೀಕ್ಷಿತ ಲಾಭ. ನಾಟ್ಯ ಸಂಯೋಜಕರಿಗೆ ಬೇಡಿಕೆ ಹೆಚ್ಚಲಿದೆ.

Edited By : Nirmala Aralikatti
PublicNext

PublicNext

31/10/2026 07:48 am

Cinque Terre

69.8 K

Cinque Terre

0