ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 01.11.2026

ಮೇಷ: ಉದ್ಯೋಗ ಸ್ಥಳದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಶ್ರಮಕ್ಕೆ ಮನ್ನಣೆ ಸಿಗಲಿದೆ. ಕಣ್ಣು ಮತ್ತು ಹೊಟ್ಟೆಯ ಸಮಸ್ಯೆ ನಿವಾರಣೆ ಆಗಲಿದೆ.

ವೃಷಭ: ಹೊಸ ಕೆಲಸ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ. ವಿವಾದದಲ್ಲಿ ಜಯ ಸಿಗಲಿದೆ. ಹಳೆಯ ಸಮಸ್ಯೆ ಪರಿಹಾರವಾಗಲಿದೆ.

ಮಿಥುನ: ಸೃಜನಾತ್ಮಕ ಆಲೋಚನೆ ಕಾರ್ಯಗತವಾಗಲಿದೆ. ಉದ್ಯೋಗ ಬದಲಾವಣೆಗೆ ನಿರ್ಧಾರ. ಹೂಡಿಕೆಯಿಂದ ಹಣ ಸಂಪಾದನೆ.

ಕಟಕ: ವೃತ್ತಿ ಕ್ಷೇತ್ರದಲ್ಲಿ ಸವಾಲುಗಳು ಎದುರಾಗಲಿದೆ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಹಿರಿಯರ ಸಲಹೆ ಅವಶ್ಯಕತೆ ಇದೆ.

ಸಿಂಹ: ಮಾಡುವ ಕೆಲಸದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ನಿಮ್ಮ ನಾಯಕತ್ವದ ಗುಣಕ್ಕೆ ಪ್ರಶಂಸೆ ಸಿಗಲಿದೆ. ಬಾಕಿ ಹಣ ಕೈಸೇರಲಿದೆ.

ಕನ್ಯಾ: ಬಟ್ಟೆ ವ್ಯಾಪಾರಿಗಳಿಗೆ ಲಾಭ ಹೆಚ್ಚಾಗಲಿದೆ. ವ್ಯವಹಾರದ ಒಪ್ಪಂದಗಳು ಲಾಭದಾಯಕ. ಉಳಿತಾಯದ ಹಣ ಖರ್ಚಾಗಲಿದೆ.

ತುಲಾ: ವೃತ್ತಿ ಜೀವನದಲ್ಲಿ ಇಂದು ಅತ್ಯುತ್ತಮ ದಿನ. ಆಸ್ತಿ ಖರೀದಿಗೆ ಯೋಜನೆ ರೂಪಿಸಿ. ಕುಟುಂಬ ಕಲಹ ಬಗೆಹರಿದು ನಿರಾಳವೆನಿಸಲಿದೆ.

ವೃಶ್ಚಿಕ: ಮನೆಬದಲಾವಣೆಗೆ ನಿರ್ಧಾರ. ಹಣಕಾಸಿನ ವ್ಯವಹಾರದಲ್ಲಿ ಹಿಡಿತವಿರಲಿ. ಕುಟುಂಬದಲ್ಲಿ ಶುಭಕಾರ್ಯ ನಡೆಯುವ ಸಾಧ್ಯತೆ.

ಧನಸ್ಸು: ಮಾಡುವ ವೃತ್ತಿಯಲ್ಲಿ ಪ್ರಗತಿ ಕಾಣಲಿದ್ದೀರಿ. ರಾಜಕೀಯದಲ್ಲಿ ಇರುವವರಿಗೆ ಪದವಿಪ್ರಾಪ್ತಿ. ವೈವಾಹಿಕ ಜೀವನದಲ್ಲಿ ಮುನಿಸು.

ಮಕರ: ಉದ್ಯೋಗದಲ್ಲಿ ಬದಟಛಿತೆಯಿಂದ ಕೆಲಸ ಮಾಡಿ. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ. ವೆಚ್ಚಗಳು ಹೆಚ್ಚಿದರೂ ಕ್ರಮೇಣ ಚೇತರಿಕೆ.

ಕುಂಭ: ಬೋಧನೆಯಲ್ಲಿ ಯಶಸ್ಸು ಗಳಿಸುವಿರಿ. ಹಳೆಯ ಸಾಲಗಳನ್ನು ತೀರಿಸಲು ದಾರಿ ಕಾಣಲಿದೆ. ಅಡಿಕೆ, ತೆಂಗು ಉತ್ಪನ್ನಗಳಿಂದ ಲಾಭ.

ಮೀನ: ಕಲಾ ಕ್ಷೇತ್ರದಲ್ಲಿ ಇರುವವರಿಗೆ ಶುಭದಿನ. ವಿದೇಶ ಪ್ರಯಾಣ ಸಾಧ್ಯತೆ. ವ್ಯವಹಾರದಲ್ಲಿ ಉತ್ತಮ ಅವಕಾಶ ಕಂಡುಬರಲಿದೆ.

Edited By : Nirmala Aralikatti
PublicNext

PublicNext

01/11/2026 07:56 am

Cinque Terre

27.42 K

Cinque Terre

0