ಬೈಲಹೊಂಗಲ: ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿ, ಸಾಮಾಜಿಕ ಬದುಕಿನಲ್ಲಿ ಮಾನವೀಯತೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಹಿರಿಯ ಮುತ್ಸದ್ದಿ, ಮಾಜಿ ಲೋಕೋಪಯೋಗಿ ಸಚಿವ ಶಿವಾನಂದ ಕೌಜಲಗಿ ಅವರ ನಿಧನದಿಂದ ಅಪರೂಪದ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿವಾನಂದ ಕೌಜಲಗಿ ಅವರಿಗೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, ಕೌಜಲಗಿ ಅವರು ತಮ್ಮ ಕುಟುಂಬದ ಹಿರಿಯ ಸದಸ್ಯರಾಗಿದ್ದು, ತಮ್ಮ ಕುಟುಂಬದೊಂದಿಗಿನ ಬಾಂಧವ್ಯ ಸುಮಾರು ಆರು ದಶಕಗಳಿಂದಲೂ ಮುಂದುವರಿದಿದೆ. ಅವರ ಸರಳತೆ, ಸಜ್ಜನಿಕೆ ಹಾಗೂ ಸಮಾಜಮುಖಿ ಚಿಂತನೆ ಎಲ್ಲರಿಗೂ ಮಾದರಿಯಾಗಿದ್ದು, ಅವರ ಅಗಲಿಕೆ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದರು.
PublicNext
31/10/2026 09:10 am
LOADING...