ಮೂಡಿಗೆರೆ ತಾಲೂಕು ಕೇಂದ್ರದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಕನ್ನಡಿಗರ ಸಂಭ್ರಮದ ಬದಲು ಶಿಷ್ಟಾಚಾರ ಉಲ್ಲಂಘನೆ ಹಾಗೂ ನಾಡಹಬ್ಬದಲ್ಲೇ ಆಂಗ್ಲ ಭಾಷೆಯ ಬಳಕೆಯಿಂದಾಗಿ ವಿವಾದಕ್ಕೆ ಸಾಕ್ಷಿಯಾಗಿದೆ. ಕಾರ್ಯಕ್ರಮಕ್ಕೆ ಶಾಸಕಿ ನಯನಾ ಮೋಟಮ್ಮ ಗೈರಾಗಿದ್ದರು. ಹೀಗಾಗಿ ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಶಂಕರ್ ಅವರಿಂದ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಪರ ಸಂಘಟನೆಗಳು ಸೇರಿದಂತೆ ಪ್ರಮುಖರಿಗೆ ಸರಿಯಾದ ಆಹ್ವಾನ ನೀಡದೆ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿದ ಕೆಂಪೇಗೌಡ ವೇದಿಕೆಯ ತಾಲೂಕು ಕಾರ್ಯದರ್ಶಿ ಪ್ರಸಾದ್ ಬಕ್ಕಿ ಅವರು, ಮಾಜಿ ಸಚಿವೆ ಮೋಟಮ್ಮ ಹಾಗೂ ತಹಶೀಲ್ದಾರ್ ಅಶ್ವಿನಿ ಅವರ ಸಮ್ಮುಖದಲ್ಲೇ ಆಕ್ರೋಶ ವ್ಯಕ್ತಪಡಿಸಿ ವೇದಿಕೆಯಿಂದ ಹೊರನಡೆಯುವ ಮೂಲಕ ತಮ್ಮ ಬಹಿರಂಗ ವಿರೋಧ ದಾಖಲಿಸಿದರು.ಇದರ ಬೆನ್ನಲ್ಲೇ, ಪಥಸಂಚಲನದಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ವಿದ್ಯಾರ್ಥಿಗಳು ತಮ್ಮ ಶಾಲೆಯ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದ ಫಲಕಗಳನ್ನು ಪ್ರದರ್ಶಿಸಿದ್ದು ಹೊಸಮಧನಕ್ಕೆ ಕಾರಣವಾಗಿದ್ದು ಕರುನಾಡ ಹಬ್ಬದಲ್ಲೇ ಆಂಗ್ಲ ಭಾಷೆ ರಾರಾಜಿಸಿರುವುದು ಹಾಗೂ ಅಧಿಕಾರಿಗಳ ಈ ನಿರ್ಲಕ್ಷ್ಯವು ಸ್ಥಳೀಯ ಕನ್ನಡಾಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
PublicNext
01/11/2026 07:29 pm
LOADING...