ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸಿ ಕಚೇರಿ ಆವರಣದಲ್ಲೇ ಸ್ವಚ್ಚತೆ ಮಾಯ: ಶೌಚಕ್ಕಾಗಿ ಸಾರ್ವಜನಿಕರ ಪರದಾಟ......

ತುಮಕೂರು: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಮಿನಿವಿಧಾನಸೌಧ ಆವರಣದ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಜಿಲ್ಲೆಯಾದ್ಯಂತ ಕಚೇರಿ ಕೆಲಸಗಳಿಗೆ ಇಲ್ಲಿಗೆ ಬರುವ ಸಾವಿರಾರು ಸಾರ್ವಜನಿಕರು ಶೌಚಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸೂಕ್ತ ನಿರ್ವಹಣೆ ಇಲ್ಲದ ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ದಿನನಿತ್ಯ ಇಲ್ಲಿಗೆ ಬರುವ ಸಾರ್ವಜನಿಕರು ಜಿಲ್ಲಾಡಳಿತದ ಆಡಳಿತ ವೈಫಲ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಮಿನಿವಿಧಾನಸೌಧದ ಆಗ್ನೇಯ ದಿಕ್ಕಿನ ಮೂಲೆಯಲ್ಲಿರುವ ಶೌಚಾಲಯದ ದುರ್ವಾಸನೆ ಬೇರೆ ಕಚೇರಿಗಳಿಗೂ ತಟ್ಟುತ್ತಿದೆ. ಸ್ವಚ್ಛಗೊಳಿಸಿ ಅದೆಷ್ಟು ತಿಂಗಳುಗಳಾಗಿವೆಯೋ, ನಿರ್ವಹಣೆ ಇಲ್ಲದೆ ನಾರುತ್ತಿದೆ. ಪಕ್ಕದಲ್ಲಿರುವ ಮಹಿಳೆಯರ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಸಂಬಂಧಪಟ್ಟವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶೌಚಾಲಯವನ್ನು ಸ್ವಚ್ಛವಾಗಿ ನಿರ್ವಹಣೆ ಮಾಡಿ ಜನರ ಶೌಚ ಬಾಧೆಗೆ ಮುಕ್ತಿ ನೀಡಬೇಕೆಂದು ಮನವಿ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

03/11/2026 04:09 pm

Cinque Terre

180

Cinque Terre

0

ಸಂಬಂಧಿತ ಸುದ್ದಿ