ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂದಿನಿ ಬೆನ್ನಲ್ಲೇ ಖಾಸಗಿ ಹಾಲಿನ ದರವೂ ಏರಿಕೆ!ಹೆರಿಟೇಜ್, ದೊಡ್ಲಾ, ತಿರುಮಲ, ಹಟ್ಸನ್ ಹಾಲು-ಮೊಸರು ದುಬಾರಿ

ಬೆಂಗಳೂರು: ನಂದಿನಿ ಹಾಲಿನ ದರ ಪರಿಷ್ಕರಣೆಯ ಬೆನ್ನಲ್ಲೇ ಖಾಸಗಿ ಹಾಲಿನ ಕಂಪನಿಗಳೂ ದರ ಏರಿಕೆಗೆ ಮುಂದಾಗಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕೆಎಂಎಫ್ ತನ್ನ ಹಾಲಿನ ಖರೀದಿ ಮತ್ತು ಮಾರಾಟ ದರಗಳನ್ನು ಪರಿಷ್ಕರಿಸಿದ ಬೆನ್ನಲ್ಲೇ ಖಾಸಗಿ ಡೈರಿ ಸಂಸ್ಥೆಗಳೂ ಹಾಲು ಹಾಗೂ ಮೊಸರಿನ ದರ ಹೆಚ್ಚಿಸಿವೆ. ಹೆರಿಟೇಜ್, ದೊಡ್ಲಾ, ತಿರುಮಲ, ಹಟ್ಸನ್ ಸೇರಿದಂತೆ ಪ್ರಮುಖ ಖಾಸಗಿ ಹಾಲಿನ ಬ್ರ್ಯಾಂಡ್‌ಗಳ ದರ ಏರಿಕೆಯಿಂದ ಹಾಲಿನ ಉದ್ಯಮದಲ್ಲಿ ಚಟುವಟಿಕೆ ಗರಿಗೆದರಿದೆ.

ನಂದಿನಿ ಹಾಲಿನ ದರ ಪರಿಷ್ಕರಣೆಯ ಬೆನ್ನಲ್ಲೇ ಖಾಸಗಿ ಡೈರಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿವೆ. ಮದರ್ ಡೈರಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹2ರಷ್ಟು ಏಕರೂಪವಾಗಿ ಹೆಚ್ಚಿಸಿದೆ. ಹೆರಿಟೇಜ್ ಹಾಲಿನ ದರದಲ್ಲಿ ಲೀಟರ್‌ಗೆ ಗರಿಷ್ಠ ₹5.90ರವರೆಗೆ ಏರಿಕೆ ಮಾಡಲಾಗಿದೆ. ವಿವಿಧ ಮಾದರಿಯ ಹೆರಿಟೇಜ್ ಹಾಲಿನ ದರಗಳು ಕನಿಷ್ಠ ₹2.50ರಿಂದ ಗರಿಷ್ಠ ₹4ರವರೆಗೆ ಹೆಚ್ಚಾಗಿವೆ. ಹೆರಿಟೇಜ್ ಮೊಸರಿನ ದರ ಪ್ರತಿ ಕೆಜಿಗೆ ₹14ರಷ್ಟು ಹೆಚ್ಚಳವಾಗಿದೆ.

ಇನ್ನು ದೊಡ್ಲಾ ಡೈರಿ ಸಂಸ್ಥೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹6ರಷ್ಟು ಹೆಚ್ಚಿಸಿದ್ದು, ಒಂದು ಕೆಜಿ ಮೊಸರಿನ ದರವನ್ನು ₹12ರಷ್ಟು ಏರಿಸಿದೆ. ತಿರುಮಲ ಮತ್ತು ಹಟ್ಸನ್ ಸೇರಿದಂತೆ ಇತರ ಖಾಸಗಿ ಬ್ರ್ಯಾಂಡ್‌ಗಳಲ್ಲೂ ದರ ಪರಿಷ್ಕರಣೆ ಮಾಡಲಾಗಿದೆ.

Edited By : Nirmala Aralikatti
PublicNext

PublicNext

03/11/2026 05:22 pm

Cinque Terre

5.18 K

Cinque Terre

0