ನವದೆಹಲಿ : ದೀಪಾವಳಿ ಹಬ್ಬಕ್ಕೆ ನೌಕರರಿಗೆ ಸ್ಟೀಟ್ಸ್,, ಡ್ರೈ ಫ್ರೂಟ್ಸ್ ಅಥವಾ ಸಣ್ಣ-ಪುಟ್ಟ ಉಡುಗೊರೆಗಳು ಇಲ್ಲ ಅಲ್ಪ ಮೊತ್ತದ ಹಣ ಕೂಡ ಬೋನಸ್ ಆಗಿ ಸಿಗುತ್ತದೆ. ಆದರೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ನೀಡಿದ ದೀಪಾವಳಿ ಬೋನಸ್ ಹಾಗೂ ಗಿಫ್ಟ್ ನೋಡಿ ಕಂಡು ಎಲ್ಲರೂ ಬೆರಗಾಗಿದ್ದಾರೆ.
ಹೌದು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಈ ಕಂಪನಿಯು ಪ್ರತಿಯೊಬ್ಬರಿಗೂ ಕೇವಲ ಗಿಫ್ಟ್ ಹ್ಯಾಂಪರ್ ನೀಡದೆ, ದುಬಾರಿ ಐಫೋನ್ 16 ಸ್ಮಾರ್ಟ್‌ಫೋನ್‌ಗಳನ್ನು ( iPhone 16 Diwali Gift ) ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ದೆಹಲಿಯ ರೋಹಿಣಿ ಮೂಲದ 'ಫೈನಾನ್ಸರ್ ಸಾಬ್' ಎಂಬ ಸಂಸ್ಥೆ ಈ ಭರ್ಜರಿ ಗಿಫ್ಟ್ ನೀಡಿದೆ. ಹಬ್ಬದ ದಿನ ಕಚೇರಿಗೆ ಬಂದ ಉದ್ಯೋಗಿಗಳಿಗೆ ಕಾದಿತ್ತು ಅನಿರೀಕ್ಷಿತ ಅಚ್ಚರಿ. ಕಚೇರಿಯ ಪ್ರತಿಯೊಬ್ಬ ಉದ್ಯೋಗಿಯ ಡೆಸ್ಕ್ ಹಾಗೂ ಕಂಪ್ಯೂಟರ್ ಮುಂದೆ ಸುಂದರವಾದ ರಿಬ್ಬನ್‌ನಿಂದ ಅಲಂಕರಿಸಲ್ಪಟ್ಟ ಬಿಳಿ, ಹಸಿರು, ನೀಲಿ ಹಾಗೂ ಕಪ್ಪು ಬಣ್ಣದ ಐಫೋನ್ 16 ಬಾಕ್ಸ್‌ಗಳನ್ನು ಇರಿಸಲಾಗಿತ್ತು. ಕೈಯಲ್ಲಿ ಲಕ್ಷ ರೂಪಾಯಿ ಬೆಲೆಬಾಳುವ ಐಫೋನ್ ಹಿಡಿದ ಉದ್ಯೋಗಿಗಳ ಮುಖದಲ್ಲಿ ಮಂದಹಾಸ ಹಾಗೂ ಸಂತಸ ಮುಗಿಲುಮುಟ್ಟಿತ್ತು.
ಇನ್ನೂ ಕಂಪನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ಸ್ಪರ್ಧೆಯೇ ಇಲ್ಲ... ನಿಮಗೇನು ಸಿಕ್ತು?” (No competition. Aapko kya mila?) ಎಂಬ ಕ್ಯಾಪ್ಷನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಕಂಪನಿಯ ಉದಾರತೆಗೆ ಫಿದಾ ಆಗಿದ್ದಾರೆ.
ವಿಡಿಯೋ ನೋಡಿದ ಹಲವರು ತಮಾಷೆಯಾಗಿ, "ನಮ್ಮ ಕಂಪನಿಯಲ್ಲಿ ಇನ್ನೂ ಅದೇ ಸೋನ್‌ಪಾಪಡಿ ಬಾಕ್ಸ್ ಕೊಡ್ತಿದ್ದಾರೆ, ನಿಮ್ಮ ಕಂಪನಿಯಲ್ಲಿ ಯಾವುದಾದರೂ ಕೆಲಸ ಖಾಲಿ ಇದೆಯೇ?", "ನನಗೂ ಒಂದು ಜಾಬ್ ಆಫರ್ ಕೊಡಿ ಪ್ಲೀಸ್!" ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ಉದ್ಯೋಗಿಗಳಿಗೆ ದುಬಾರಿ ಗಿಫ್ಟ್ ನೀಡಿ ದೀಪಾವಳಿ ಆಚರಿಸಿದ ಈ ಸಂಸ್ಥೆಯ ಐಡಿಯಾ ಈಗ ಇಂಟರ್ನೆಟ್‌ನಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ.
PublicNext
05/11/2026 12:53 pm