ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕು ತೋಟಗಾರಿಕೆ ಇಲಾಖೆಯಿಂದ 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣ ಕೈಗೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಘಟಕದ ವೆಚ್ಚವು ಪ್ರತಿ ಹೆಕ್ಟೇರ್‌ಗೆ ರೂ. 5000 ಆಗಲಿದ್ದು, ಶೇ.30ರಂತೆ ಪ್ರತಿ ಹೆಕ್ಟೇರ್‌ಗೆ ರೂ. 1500ರ ವರೆಗೆ ಪ್ರತಿ ಫಲಾನುಭವಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ ಸಹಾಯಧನ ನೀಡಲಾಗುವುದು. ಆಸಕ್ತ ತಾಲೂಕಿನ ರೈತರು ನವೆಂಬರ್ 30ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಚಿಕ್ಕಮಗಳೂರಿನ ಜಿ.ಪಂ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ರೈತರು ಸಂಪರ್ಕಿಸಬಹುದಾಗಿದೆ. ಜಾಗರ ಹೋಬಳಿಗೆ ನಟೇಶ್ ಕುಮಾರ್ ಹೆಚ್.ಎ (7899048055), ಲಕ್ಯಾ ಹೋಬಳಿಗೆ ಗುರುರಾಜ್ ಎಸ್ (7892338387), ಖಾಂಡ್ಯ ಹೋಬಳಿಗೆ ಸೀಮಾ ಹೆಚ್.ಎ (9380956582) ಹಾಗೂ ಆಲ್ದೂರು ಹೋಬಳಿಗೆ ಭಾನುಶ್ರೀ (9380126498) ಅವರನ್ನು ಸಂಪರ್ಕಿಸಬಹುದು. ಅದೇ ರೀತಿ, ಆವತಿ ಹೋಬಳಿಗೆ ಪೂಜಾ ಡಿ.ಎ (9483696760), ವಸ್ತಾರೆ ಮತ್ತು ಅಂಬಳೆ ಹೋಬಳಿಗೆ ಅರುಣ್ ವಿ.ಎ (8277038990) ಹಾಗೂ ಕಸಬಾ ಹೋಬಳಿಗೆ ದೇವರಾಜ್ ಪಿ.ಇ (9663703151) ಅವರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಪಂಚಾಯಿತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
04/11/2026 07:31 pm
LOADING...