ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತರೀಕೆರೆ : ಬೆವರು ಹರಿಸಿ ಬೆಳೆದ ಗಿಡಗಳೇ ಬಲಿ: ವೈಯಕ್ತಿಕ ದ್ವೇಷಕ್ಕೆ ಅಡಿಕೆ ಮರಗಳನ್ನು ಕಡಿದುಹಾಕಿದ ಅಮಾನವೀಯ ಕೃತ್ಯ!

ತರೀಕೆರೆ : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಾಲ್ಕು ವರ್ಷದ 150ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕಡಿದುಹಾಕಿರುವ ಘಟನೆ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ವರದಿಯಾಗಿದೆ. ಮುಕ್ಕಾಲು ಎಕರೆ ಪ್ರದೇಶದಲ್ಲಿ ಸಣ್ಣಪ್ಪ ಎಂಬ ರೈತರು ಶ್ರಮ ಹಾಗೂ ಕಾಳಜಿಯಿಂದ ಅಡಿಕೆ ಗಿಡಗಳನ್ನು ಬೆಳೆಸಿದ್ದರು. ಆದರೆ, ದುಷ್ಕರ್ಮಿಗಳು ರಾತ್ರೋರಾತ್ರಿ ರೈತನ ಕಷ್ಟದ ಫಲವನ್ನು ಕಡಿದು ನಾಶಪಡಿಸಿದ್ದು, ಈ ಕೃತ್ಯದ ಹಿಂದೆ ವೈಯಕ್ತಿಕ ದ್ವೇಷವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈ ಕೃತ್ಯದ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ. ಕೃಷಿಕನ ಬದುಕಿಗೆ ಕೊಳ್ಳಿ ಇಟ್ಟ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By :
PublicNext

PublicNext

22/10/2026 12:00 pm

Cinque Terre

7.37 K

Cinque Terre

0

ಸಂಬಂಧಿತ ಸುದ್ದಿ