ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಜೈಲ್ ಭರೋ ಚಳವಳಿಗೆ ತೆರಳುತ್ತಿದ್ದ ರೈತ ಅಸ್ವಸ್ಥ: ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದರಾ ಪೊಲೀಸರು?

ಬೆಳಗಾವಿ : ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ನಡೆಯುತ್ತಿದ್ದ ಜೈಲ್ ಭರೋ ಚಳವಳಿಗೆ ಆಗಮಿಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಗೋಕಾಕ್ ಕಡೆಗೆ ಕರೆದೊಯ್ಯುತ್ತಿದ್ದ ವೇಳೆ ರೈತರೊಬ್ಬರು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೈತನ ಆರೋಗ್ಯದಲ್ಲಿ ಪೊಲೀಸ್ ವಾಹನದಲ್ಲೇ ಏರುಪೇರಾಗಿದೆ. ಈ ವೇಳೆ ವಾಹನ ನಿಲ್ಲಿಸಿ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ಸಹ ರೈತರು ಪೊಲೀಸರನ್ನು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಆದರೆ, ರೈತನ ಆರೋಗ್ಯದ ಬಗ್ಗೆ ಮನವಿ ಮಾಡಿದರೂ ಪೊಲೀಸರು ಬಸಾಪುರ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಅವರನ್ನು ಬಿಟ್ಟು ಹೋಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದರಿಂದ ಆತಂಕಗೊಂಡ ಸಹ ರೈತರು ನಿರ್ಜನ ಪ್ರದೇಶದಲ್ಲಿದ್ದ ಅಸ್ವಸ್ಥ ರೈತನನ್ನು ಹೊತ್ತುಕೊಂಡು ಬಂದು ಬಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿ ರೈತನಿಗೆ ಚಿಕಿತ್ಸೆ ನೀಡಲಾಗಿದೆ.

ಜೈಲ್ ಭರೋ ಚಳವಳಿಗೆ ತೆರಳುತ್ತಿದ್ದ ರೈತರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ನಡೆದ ಈ ಘಟನೆ ಪೊಲೀಸ್ ಕಾರ್ಯವೈಖರಿ ಕುರಿತು ಆಕ್ರೋಶಕ್ಕೆ ಕಾರಣವಾಗಿದೆ.

Edited By : Vinayak Patil
PublicNext

PublicNext

05/11/2026 01:52 pm

Cinque Terre

1.9 K

Cinque Terre

0

ಸಂಬಂಧಿತ ಸುದ್ದಿ