", "articleSection": "Crime,Government,Public Feed", "image": { "@type": "ImageObject", "url": "https://prod.cdn.publicnext.com/s3fs-public/463655-1750341079-manjunath---2025-06-19T192115.025.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದಾವಣಗೆರೆ: ಜಿಲ್ಲಾಧಿಕಾರಿಗೆ ಬೈಕ್ ಸವಾರನೊಬ್ಬ ಧಮ್ಕಿ ಹಾಕಿರುವ ಘಟನೆ ದಾವಣಗೆರೆ ನಗರದ ರಿಂಗ್‌ ರಸ್ತೆಯಲ್ಲಿ ನಡೆದಿದೆ. ನಗರದ ಶಾರದಾಂಭ ದೇವ...Read more" } ", "keywords": "Dalit writer attack, Davangere, Uchachangi Prasad, police investigation, closure report, alleged assault, caste system, anti-Hindu, India, Karnataka, Kalburgi assassination, intolerance, fake attack, Dalit rights, human rights, India news, Karnataka news ", "url": "https://dashboard.publicnext.com/node" } ದಾವಣಗೆರೆ: "ನೀನು ಯಾವನೋ ಕೇಳೋಕೆ?" ಜಿಲ್ಲಾಧಿಕಾರಿಗೆ ಬೈಕ್ ಸವಾರನ ದಮ್ಕಿ !
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: "ನೀನು ಯಾವನೋ ಕೇಳೋಕೆ?" ಜಿಲ್ಲಾಧಿಕಾರಿಗೆ ಬೈಕ್ ಸವಾರನ ದಮ್ಕಿ !

ದಾವಣಗೆರೆ: ಜಿಲ್ಲಾಧಿಕಾರಿಗೆ ಬೈಕ್ ಸವಾರನೊಬ್ಬ ಧಮ್ಕಿ ಹಾಕಿರುವ ಘಟನೆ ದಾವಣಗೆರೆ ನಗರದ ರಿಂಗ್‌ ರಸ್ತೆಯಲ್ಲಿ ನಡೆದಿದೆ.

ನಗರದ ಶಾರದಾಂಭ ದೇವಸ್ಥಾನ ಬಳಿ ಬೆಳಿಗ್ಗೆ ಸೈಕಲ್‌ ಚಾಲನೆ ಮಾಡುತ್ತಿದ್ದ ದಾವಣಗೆರೆ ಜಿಲ್ಲಾಧಿಕಾರಿ ಡಾ. ಜಿ. ಎಂ. ಗಂಗಾಧರಸ್ವಾಮಿ ಅವರಿಗೆ, ಓನ್‌ ವೇನಲ್ಲಿ ದಾರಿಯಲ್ಲಿ ಬಂದು ಬೈಕ್ ಸವಾರನು ಅಡ್ಡವಾಗಿ ನಿಂತಿದ್ದಾನೆ.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, "ಈ ದಾರಿ ಓನ್‌ವೇ, ನೀವು ತಪ್ಪಾಗಿ ಬಂದಿದ್ದೀರಿ" ಎಂದು ಕೇಳಿದಾಗ, ಬೈಕ್ ಸವಾರನು "ನೀನು ಯಾರು ಕೇಳೋಕೆ?" ಎಂದು ಆಕ್ರೋಶದಿಂದ ಧಮ್ಕಿ ಹಾಕಿದ್ದಾನೆ.

ಈ ಕುರಿತು ಜಿಲ್ಲಾಧಿಕಾರಿ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ಬೈಕ್ ನಂಬರ್ ನೀಡಿದ್ದು, ಸವಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಸವಾರನ ಗುರುತುಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

Edited By :
PublicNext

PublicNext

19/06/2025 07:22 pm

Cinque Terre

23.1 K

Cinque Terre

1