", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1750472281-rcr-copy.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಸ್ಕಿ: ಪಟ್ಟಣದ ಗಾಂಧಿನಗರದಲ್ಲಿರುವ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯದ ಮಲಮೂತ್ರ ಪಿಟ್ ಗುಂಡಿ ತುಂಬಿದ್ದರಿಂದ ಮುಚ್ಚಳ ತೆರೆದುಕೊಂಡು ದು...Read more" } ", "keywords": "Maski KSRTC bus station toilet renovation, public toilet cleanliness, Karnataka transformation, public facilities improvement, sanitation initiative", "url": "https://dashboard.publicnext.com/node" } ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ ಮಸ್ಕಿ: ಗಬ್ಬೆದ್ದು ನಾರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಶೌಚಾಲಯ ಈಗ ಸ್ವಚ್ಛವಾಯ್ತು!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ ಮಸ್ಕಿ: ಗಬ್ಬೆದ್ದು ನಾರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಶೌಚಾಲಯ ಈಗ ಸ್ವಚ್ಛವಾಯ್ತು!

ಮಸ್ಕಿ: ಪಟ್ಟಣದ ಗಾಂಧಿನಗರದಲ್ಲಿರುವ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯದ ಮಲಮೂತ್ರ ಪಿಟ್ ಗುಂಡಿ ತುಂಬಿದ್ದರಿಂದ ಮುಚ್ಚಳ ತೆರೆದುಕೊಂಡು ದುರ್ವಾಸನೆ ಬರುತ್ತಿತ್ತು. ಇದರಿಂದಾಗಿ ಪ್ರಯಾಣಿಕರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಪಬ್ಲಿಕ್ ನೆಕ್ಸ್ಟ್ ನಲ್ಲಿ ಜೂನ್ 16ರಂದು "ಗಬ್ಬೆದ್ದು ನಾರುತ್ತಿದೆ ಮಸ್ಕಿ ಬಸ್ ನಿಲ್ದಾಣ" ಎಂಬ ಶೀರ್ಷಿಕೆಯಡಿಯಲ್ಲಿ ವರದಿಯನ್ನು ಪ್ರಸಾರ ಮಾಡಲಾಗಿತ್ತು. ಈ ವರದಿಗೆ ಎಚ್ಚೆತ್ತುಕೊಂಡ ಕೆಎಸ್ ಆರ್ ಟಿಸಿ ಅಧಿಕಾರಿಗಳು, ಎರಡು ದಿನಗಳಿಂದ ಶೌಚಾಲಯದ ಪಿಟ್ ಗುಂಡಿಯನ್ನು ಸ್ವಚ್ಛಗೊಳಿಸಿ ನಂತರ ಹಳೆಯ ಪೈಪ್ ಲೈನ್ ಗಳನ್ನು ತೆಗೆದು ಹೊಸ ಪೈಪ್ ಲೈನ್ ಗಳನ್ನು ಅಳವಡಿಸಿ ಶೌಚಾಲಯದ ಸುತ್ತಮುತ್ತ ಮಳೆಯ ನೀರು ನಿಲ್ಲದಂತೆ ಹಾಗೂ ಶೌಚಾಲಯದ ಮಲಮೂತ್ರ, ಬಸ್ ನಿಲ್ದಾಣದಲ್ಲಿ ಹರಡದಂತೆ ತಡೆಯಲು ಬಸ್ ನಿಲ್ದಾಣದ ಕಾಂಪೌಂಡ್ ಪಕ್ಕದಲ್ಲಿ ನೀರು ಹರಿಯಲು ವ್ಯವಸ್ಥೆ ಮಾಡಲಾಗಿದೆ ಎಂದು ರಾಯಚೂರು ಕೆಎಸ್ ಆರ್ ಟಿಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಣ್ಣಪ್ಪ ತಿಳಿಸಿದರು.

ಇನ್ನು ಮುಂದಾದರೂ ಬಸ್‌ ನಿಲ್ದಾಣದ ಶೌಚಾಲಯ ಸಾರ್ವಜನಿಕರಿಗೆ ಸಮಸ್ಯೆಯಾಗದೆ ಸದುಪಯೋಗವಾಗಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ. ಸಮಸ್ಯೆಯನ್ನು ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನಕ್ಕೆ ತಂದದ್ದಕ್ಕೆ ಸಾರ್ವಜನಿಕರು ಪಬ್ಲಿಕ್‌ ನೆಕ್ಸ್ಟ್‌ ಗೆ ಧನ್ಯವಾದ ಸಲ್ಲಿಸಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

Edited By : Manjunath H D
PublicNext

PublicNext

21/06/2025 07:48 am

Cinque Terre

18.73 K

Cinque Terre

0