", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/286525-1750173086-raiiiiii.mp4_snapshot_00.00.261.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಸ್ಕಿ : ಮಸ್ಕಿ ತಾಲೂಕಿನ ಪಿಡಬ್ಲ್ಯೂಡಿ, ಕೆ ಪಿ ಎಸ್ ಪ್ರಾಥಮಿಕ ಶಾಲೆಯಲ್ಲಿ ಮ್ಯಾಕ್ರೋ ಯೋಜನೆಯಡಿ ಕ್ಯಾಷುಟೆಕ್ ನಿರ್ಮಿತ ಕೇಂದ್ರದಿಂದ 19.31...Read more" } ", "keywords": "Raichur, school compound, high-tech toilet, construction project, Raichur news, education infrastructure, school facilities, Raichur district", "url": "https://dashboard.publicnext.com/node" } ರಾಯಚೂರು : ಶಾಲಾ ಕಂಪೌಂಡ್ ಮೇಲೆ ಹೈಟೆಕ್ ಶೌಚಾಲಯ, ನಿರ್ಮಿಸಿದ ಭೂಪರು...!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ಶಾಲಾ ಕಂಪೌಂಡ್ ಮೇಲೆ ಹೈಟೆಕ್ ಶೌಚಾಲಯ, ನಿರ್ಮಿಸಿದ ಭೂಪರು...!

ಮಸ್ಕಿ : ಮಸ್ಕಿ ತಾಲೂಕಿನ ಪಿಡಬ್ಲ್ಯೂಡಿ, ಕೆ ಪಿ ಎಸ್ ಪ್ರಾಥಮಿಕ ಶಾಲೆಯಲ್ಲಿ ಮ್ಯಾಕ್ರೋ ಯೋಜನೆಯಡಿ ಕ್ಯಾಷುಟೆಕ್ ನಿರ್ಮಿತ ಕೇಂದ್ರದಿಂದ 19.31ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್‌ ಶೌಚಾಲಯವು ಶಾಲಾ ಹಳೆಯ ಕಾಂಪೌಂಡ್ ಗೋಡೆಯ ಮೇಲೆ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಕಳಪೆ ಬ್ಲಾಕ್ ಇಟ್ಟಿಗೆ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದ್ದು ತಳಪಾಯ ಹಾಕದೆ ನಿರ್ಮಾಣ ಮಾಡುತ್ತಿರುವುದರಿಂದ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇನ್ನು ತಾಲೂಕಿನಾದ್ಯಂತ 80% ಕಾಮಗಾರಿಗಳು ಕ್ಯಾಷುಟೆಕ್ ನಿರ್ಮಿತ ಇಂಜಿನಿಯರ್ ಗಳು ಮಾಡಿದ್ದೆ ಕಾರುಬಾರು. ಇದರ ಬಗ್ಗೆ ಯಾವುದೇ ಜನಪ್ರತಿನಿಧಿಗಳಾಗಲಿ ಹಾಗೂ ಅಧಿಕಾರಿಗಳಾಗಲಿ ಪ್ರಶ್ನಿಸದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.

ಇನ್ನು ಸರಕಾರದ ನಿಯಮಗಳು, ಗಾಳಿಗೆ ತೂರಿ ಹಳೆಯ ಕಾಂಪೌಂಡ್ ಮೇಲೆ ಶೌಚಾಲಯದ ಗೋಡೆಯನ್ನು ನಿರ್ಮಾಣ ಮಾಡಿದ್ದರು ಅಧಿಕಾರಿಗಳು ಕಣ್ಣಿದ್ದು ಕುರುಡರಂತಾಗಿದ್ದಾರೆ. ತಾಲೂಕಿನ ಅನೇಕ ಕಾಮಗಾರಿಗಳಲ್ಲಿ ಕ್ಯಾಷುಟೆಕ್ ನಿರ್ಮಿತ ಕೇಂದ್ರದ ಎಂಜನಿಯರ್‌ಗಳು ಆಡಿದ್ದೇ ಆಟದಂತಾಗಿದೆ ಇದಕ್ಕೆ ಕುಮ್ಮಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಇನ್ಮುಂದೆ ಆದರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಕಾರಿ ಶಾಲೆ ಸೇರಿದಂತೆ ತಾಲೂಕಿನಾದ್ಯಂತ ಸರಕಾರ ಅನುದಾನದ ಕೆಲಸಗಳನ್ನು ಗುಣಮಟ್ಟದಿಂದ ಮಾಡುವರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ವರದಿ:ದುರ್ಗೇಶ್ ಹಸಮಕಲ್ ಮಸ್ಕಿ

Edited By : Shivu K
PublicNext

PublicNext

17/06/2025 08:41 pm

Cinque Terre

40.13 K

Cinque Terre

0