", "articleSection": "Business,Government", "image": { "@type": "ImageObject", "url": "https://prod.cdn.publicnext.com/s3fs-public/454738-1751108964-New-(1280-x-720-px)-(28).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "Harish.K" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಕರ್ನಾಟಕದ ಹೆಮ್ಮೆಯ ನಂದಿನಿ, ಈಗ ಇಡೀ ಭಾರತದ ಟಾಪ್ ಬ್ರ್ಯಾಂಡ್‌ಗಳ ಸಾಲಿನಲ್ಲಿ ನಿಂತಿದೆ ! ಪ್ರತಿಷ್ಠಿತ ಬ್ರಾಂಡ್ ಫೈನಾನ್ಸ್ 2025ರ...Read more" } ", "keywords": "Nandini Brand Valuation: Nandini in India's Top 40 most valuable brands", "url": "https://dashboard.publicnext.com/node" } ಬೆಂಗಳೂರು : ನಂದಿನಿ ಈಗ ಭಾರತದ ಟಾಪ್ 40 ಅತ್ಯಮೂಲ್ಯ ಬ್ರ್ಯಾಂಡ್‌ಗಳಲ್ಲಿ ಒಂದು !
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನಂದಿನಿ ಈಗ ಭಾರತದ ಟಾಪ್ 40 ಅತ್ಯಮೂಲ್ಯ ಬ್ರ್ಯಾಂಡ್‌ಗಳಲ್ಲಿ ಒಂದು !

ಬೆಂಗಳೂರು : ಕರ್ನಾಟಕದ ಹೆಮ್ಮೆಯ ನಂದಿನಿ, ಈಗ ಇಡೀ ಭಾರತದ ಟಾಪ್ ಬ್ರ್ಯಾಂಡ್‌ಗಳ ಸಾಲಿನಲ್ಲಿ ನಿಂತಿದೆ ! ಪ್ರತಿಷ್ಠಿತ ಬ್ರಾಂಡ್ ಫೈನಾನ್ಸ್ 2025ರ ವರದಿಯ ಪ್ರಕಾರ, ನಂದಿನಿ ಭಾರತದ 40 ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ಗಳಲ್ಲಿ 38ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕಿಂತ ಬರೋಬ್ಬರಿ 5 ಸ್ಥಾನಗಳ ಏರಿಕೆ ಕಂಡಿರುವ ನಂದಿನಿ, ಆಹಾರ ಮತ್ತು ಪಾನೀಯ ವಿಭಾಗದಲ್ಲಿ 4ನೇ ಸ್ಥಾನದಲ್ಲಿದೆ. ಇದರ ಬ್ರ್ಯಾಂಡ್ ಮೌಲ್ಯ ಈಗ 1.079 ಶತಕೋಟಿ ಡಾಲರ್‌ ಗಳಷ್ಟಿದೆ. ಇದು ಕೇವಲ ಡೈರಿ ಉತ್ಪನ್ನಗಳ ಯಶಸ್ಸಲ್ಲ, ಇದು ನಂದಿನಿಯ ಮೇಲಿರುವ ನಂಬಿಕೆ, ಅದರ ರುಚಿ ಮತ್ತು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿದೆ.

ನಂದಿನಿ ಕೇವಲ ಬೆಳೆಯುತ್ತಿಲ್ಲ, ಅದು ಮುನ್ನಡೆ ಸಾಧಿಸುತ್ತಿದೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಅವರು ತಮ್ಮ X ಖಾತೆ ಯಲ್ಲಿ ಬರೆದಿದ್ದು, ಗ್ರಾಹಕರ ವಿಶ್ವಾಸವನ್ನು ಗೆದ್ದು, ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೆ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ.

ಪ್ರತಿಯೊಂದು ಹನಿ ನಂದಿನಿ ಉತ್ಪನ್ನದಲ್ಲೂ ಪ್ರಾಮಾಣಿಕತೆ ಮತ್ತು ಶ್ರೇಷ್ಠತೆಯ ಸಂದೇಶವಿದೆ. ಈ ಸಾಧನೆಯು ಕರ್ನಾಟಕದ ಡೈರಿ ಉದ್ಯಮಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಗೌರವ ತಂದಿದೆ ಎಂದು ಬರೆದಿದ್ದಾರೆ. ಹಾಗೂ ನಂದಿನಿ ಮುಂದೆಯೂ ಇದೇ ರೀತಿ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹಾರೈಸಿದ್ದಾರೆ .

Edited By :
PublicNext

PublicNext

28/06/2025 04:39 pm

Cinque Terre

10.54 K

Cinque Terre

1

ಸಂಬಂಧಿತ ಸುದ್ದಿ