", "articleSection": "Accident,Viral", "image": { "@type": "ImageObject", "url": "https://prod.cdn.publicnext.com/s3fs-public/229640-1751200075-bng4.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Raghavendra Bng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನೆಲಮಂಗಲ: ಫ್ಲೈಓವರ್ ಮೇಲೆ ಫ್ಲೆಕ್ಸ್ ತೆರವು ಮಾಡುವ ವೇಳೆ ಗಾಳಿಗೆ ಹಾರಿ ಚಲಿಸುತ್ತಿದ್ದ ಕಾರಿಗೆ ಬಡಿದ ಪರಿಣಾಮ ಕಾರಿನ ಮುಂಭಾಗದ ಗ್ಲಾಸ್ ಒಡೆದ...Read more" } ", "keywords": "Bengaluru flex board accident, flex falls on moving car, Bengaluru traffic incident, viral video Bengaluru, flex board collapse.", "url": "https://dashboard.publicnext.com/node" }
ನೆಲಮಂಗಲ: ಫ್ಲೈಓವರ್ ಮೇಲೆ ಫ್ಲೆಕ್ಸ್ ತೆರವು ಮಾಡುವ ವೇಳೆ ಗಾಳಿಗೆ ಹಾರಿ ಚಲಿಸುತ್ತಿದ್ದ ಕಾರಿಗೆ ಬಡಿದ ಪರಿಣಾಮ ಕಾರಿನ ಮುಂಭಾಗದ ಗ್ಲಾಸ್ ಒಡೆದಿರುವ ಘಟನೆ ಬೆಂಗಳೂರು ಹೊರವಲಯದ ತುಮಕೂರು ರಸ್ತೆಯ 8ನೇ ಮೈಲಿ ಬಳಿ ನಡೆದಿದ್ದು, ದೃಶ್ಯ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೆಲಮಂಗಲ ಮೂಲದ ದಂಪತಿಗಳು, ಮಗು ಸಹಿತ ತಮ್ಮ ಕಾರಿನಲ್ಲಿ 8ನೇ ಮೈಲಿ ಫ್ಲೈ ಓವರ್ ಮೇಲೆ ನೆಲಮಂಗಲ ಕಡೆಗೆ ಬರ್ತಿದ್ರು ಇದೇ ವೇಳೆ ಫ್ಲೈ ಓವರ್ ಮೇಲೆ ಕಟ್ಟಲಾಗಿದ್ದ ಜಾಹಿರಾತು ಫ್ಲೆಕ್ಸ್‌ಗಳನ್ನು ಟೋಲ್ ಸಿಬ್ಬಂದಿ ತೆರವು ಮಾಡ್ತಿದ್ರು. ಸಿಬ್ಬಂದಿ ಮುಂಜಾಗ್ರತೆ ವಹಿಸದೆ ಏಕಾಏಕಿ ಫ್ಲೆಕ್ಸ್ಎಳೆದ ಪರಿಣಾಮ ಫ್ಲೆಕ್ಸ್ ಕಾರಿಗೆ ಬಂದು ಅಪ್ಪಳಿಸಿ ಕಾರಿನ ಮುಂಭಾಗದ ಗಾಜು ಒಡೆದು ಹೋಗಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ದಂಪತಿ ಹಾಗೂ ಮಗುವಿಗೆ ಯಾವ ತೊಂದರೆಯಾಗಿಲ್ಲ.
ಈ ದುರಂತದ ಬಗ್ಗೆ ಪ್ರಶ್ನೆ ಮಾಡಲು ದಂಪತಿ ನೆಲಮಂಗಲ ನವಯುಗ ಬಳಿಯ ಟೋಲ್ ಕಂಪನಿ ಕಚೇರಿಗೆ ಹೋದಾಗ ಕಚೇರಿ ಸಿಬ್ಬಂದಿ ಸರಿಯಾಗಿ ಸ್ಪಂದಿಸದೆ ಉಡಾಫೆ ಉತ್ತರ ನೀಡಿದ್ದಾರೆ. ಅಲ್ಲದೇ ದಂಪತಿಗೆ ದಮ್ಕಿ ಕೂಡಾ ಹಾಕಿದ್ದಾರೆ. ಈ ವರ್ತನೆಗೆ ಸ್ಥಳಿಯರು ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಫ್ಲೈಓವರ್ ಕಂಬಗಳಲ್ಲಿ ಜಾಹಿರಾತು ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ. ಈಗ ಫ್ಲೆಕ್ಸ್ ಕಳಚಿಕೊಂಡು ಕಾರಿನ ಮೇಲೆ ಬೀಳುವ ದೃಶ್ಯದಿಂದ ವಾಹನ ಸವಾರರನ್ನು ಬೆಚ್ಚಿ ಬಿದ್ದಿದ್ದು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತವಾಗ್ತಿದೆ.
PublicNext
29/06/2025 05:58 pm