", "articleSection": "Health & Fitness", "image": { "@type": "ImageObject", "url": "https://prod.cdn.publicnext.com/s3fs-public/387839-1751261002-Untitled-design---2025-06-30T105707.663.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾಸನ: ಜಿಲ್ಲೆಯಲ್ಲಿ ಸಾವಿನ ಸೂತಕದ ಛಾಯೆ ಮುಂದುವರೆದಿದ್ದು, ಹೃದಯಾಘಾತಕ್ಕೆ ಸೈನಿಕನೋರ್ವ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿ...Read more" } ", "keywords": "Hassan, heart attack, soldier's death, 19th case, farm work, cardiac arrest. ", "url": "https://dashboard.publicnext.com/node" } ಹಾಸನ: ಉಳುಮೆ ವೇಳೆ ಹೃದಯಾಘಾತ - ಸೈನಿಕನ ಸಾವು, ಹಾಸನದಲ್ಲಿ 19ನೇ ಪ್ರಕರಣ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಉಳುಮೆ ವೇಳೆ ಹೃದಯಾಘಾತ - ಸೈನಿಕನ ಸಾವು, ಹಾಸನದಲ್ಲಿ 19ನೇ ಪ್ರಕರಣ!

ಹಾಸನ: ಜಿಲ್ಲೆಯಲ್ಲಿ ಸಾವಿನ ಸೂತಕದ ಛಾಯೆ ಮುಂದುವರೆದಿದ್ದು, ಹೃದಯಾಘಾತಕ್ಕೆ ಸೈನಿಕನೋರ್ವ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಒಂದೇ ವಾರದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ ಅಲಿಯಾಸ್ ಪುಚ್ಚಿ (38) ಮೃತಪಟ್ಟ ಸೈನಿಕ. ಕಳೆದ 18 ವರ್ಷಗಳಿಂದ ಸೈನಿಕರಾಗಿ ದೇಶಸೇವೆ ಮಾಡಿದ್ದರು. ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದು, 3 ವರ್ಷದ ಹೆಣ್ಣು ಮಗಳಿದ್ದಾಳೆ.

18 ವರ್ಷ ದೇಶಸೇವೆ ಮೂಲಕ ಸೈನಿಕ ವೃತ್ತಿ ಮಾಡಿದ್ದ ಲೋಹಿತ್ ಮುಂದಿನ ವರ್ಷ ನಿವೃತ್ತಿಯಾಗಿ ಊರಿಗೆ ಬಂದು ಮಡದಿ ಮಕ್ಕಳೊಂದಿಗೆ ವಾಸವಿರಬೇಕು ಎಂದುಕೊಂಡಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿದೆ. ಹೆಂಡತಿ ಮತ್ತು ಮಗಳನ್ನು ನೋಡಲು ರಜೆ ಮೇಲೆ ಬಂದಿದ್ದ ಯೋಧ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಯೋಧ ಲೋಹಿತ್ ಅವರು​ ಜುಲೈ 03ರಂದು ವಾಪಸ್ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಹಾಗಾಗಿ ಜು.3ರಂದು ರೈಲಿನಲ್ಲಿ ಹೊರಡಲು ಟಿಕೆಟ್ ಕೂಡಾ ಬುಕ್ ಮಾಡಿದ್ದರು.

Edited By : Abhishek Kamoji
PublicNext

PublicNext

30/06/2025 10:53 am

Cinque Terre

9.46 K

Cinque Terre

3